ಬಂಟ್ವಾಳ :ನವನೀತ ಬಾಲಗೋಕುಲ ನೆತ್ತರಕೆರೆ ಇದರ ಅಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಗೋಕುಲಷ್ಟಮಿಯು ವಿವಿಧ ಧಾರ್ಮಿಕ,ಸಂಸ್ಕೃತಿಕ ಕಾರ್ಯಕ್ರಮದೊಂದಿಗೆ ಆ. 26ರಂದು ಸೋಮವಾರ ನೆತ್ತರಕೆರೆಯಲ್ಲಿ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮವನ್ನು ಭಗಿನಿ ಮೀನಾಕ್ಷಿ, ಸಹ ಬೌದ್ದಿಕ್ ಪ್ರಮುಖ್ ರಾಷ್ಟ್ರ ಸೇವಿಕಾ ಸಮಿತಿ ಕರ್ನಾಟಕ ದಕ್ಷಿಣ ಪ್ರಾಂತ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು, ವೇದಿಕೆಯಲ್ಲಿ ಪ್ರಿಯದರ್ಶಿನಿ ದರಿಬಾಗಿಲು, ಬಾಲ ಗೋಕುಲ ಸಮಿತಿಯ ಅಧ್ಯಕ್ಷ ಮೋಹನ ಕುಲಾಲ್ ಸಂಯೋಜಕ ಮೋಹನ ಆಚಾರ್ಯ ಉಪಸ್ಥಿತರಿದ್ದರು.
ಮಕ್ಕಳು ರಾಧಕೃಷ್ಣ ವೇಷ ಹಾಕಿ ಸಂಭ್ರಮಪಟ್ಟರು, ಈ ಸಂದರ್ಭದಲ್ಲಿ ಶ್ರೀಕೃಷ್ಣ
ದೇವರ ಕಥೆ ಹೇಳುವುದು, ದೇಶಭಕ್ತಿಗೀತೆ ಸ್ಪರ್ಧೆ, ಮಡಕೆ ಒಡೆಯುವುದು ಹಾಗೂ ಚಿಕ್ಕ ಮಕ್ಕಳಿಂದ 9ನೇ ತರಗತಿಯವರೆಗಿನ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ನಂತರ ಬಾಲಗೋಕುಲದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬಾಲ ಗೋಕುಲದ ಮಾತಾಜಿ ಕು. ಗೌತಮಿ, ಕು ಲಿಖಿತ, ಕು ವರ್ಷ, ಕು ಸಿಂಧು, ಕು ಶ್ರಾವ್ಯ, ಕು ನಿವೇದಿತಾ ಸಹಕರಿಸಿದರು.















