ಪೊಳಲಿ:ಎಸ್. ಆರ್. ಹಿಂದೂ ಫ್ರೆಂಡ್ಸ್ ಅಶ್ರಯದಲ್ಲಿ ವಿದ್ಯಾರ್ಥಿ ವೇತನ ವಿತರಣೆ ಹಾಗೂ ವನ ಮಹೋತ್ಸವ ಕಾರ್ಯಕ್ರಮ.

Coastal Bulletin
ಪೊಳಲಿ:ಎಸ್. ಆರ್. ಹಿಂದೂ ಫ್ರೆಂಡ್ಸ್ ಅಶ್ರಯದಲ್ಲಿ ವಿದ್ಯಾರ್ಥಿ ವೇತನ ವಿತರಣೆ ಹಾಗೂ ವನ ಮಹೋತ್ಸವ ಕಾರ್ಯಕ್ರಮ.

ಬಂಟ್ವಾಳ :ಎಸ್. ಆರ್. ಹಿಂದೂ ಫ್ರೆಂಡ್ಸ್ ಪೊಳಲಿ ಹಾಗೂ ಸಹ್ಯಾದ್ರಿ ತಾಂತ್ರಿಕ ಮಹಾ ವಿದ್ಯಾಲಯ ಅಡ್ಯಾರ್, ಮಂಗಳೂರು ಇವರ ಸಹಯೋಗದಲ್ಲಿ ವಿದ್ಯಾರ್ಥಿ ವೇತನ ವಿತರಣೆ ಹಾಗೂ ವನ ಮಹೋತ್ಸವ ಕಾರ್ಯಕ್ರಮವು ಪೊಳಲಿ ಸರ್ವಮಂಗಳ ಕಲ್ಯಾಣ ಮಂಟಪದಲ್ಲಿ ಜು 27ರಂದು ನಡೆಯಿತು.

ಬಿ. ದೇವದಾಸ್ ಹೆಗ್ಡೆ, ಅಮುಂಜೆಗುತ್ತು, ನಿರ್ದೇಶಕರು ಸಹ್ಯಾದ್ರಿ ತಾಂತ್ರಿಕ ಮಹಾ ವಿದ್ಯಾಲಯ ಅಡ್ಯಾರ್, ಮಂಗಳೂರು ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. 2024-25 ಸಾಲಿನ 10ನೇ ತರಗತಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಹಾಗೂ ಡಾ ಎಸ್ ಎಸ್ ಇಂಜಾಗನೇರಿ ಪ್ರಾಂಶುಪಾಲರು ಸಹ್ಯಾದ್ರಿ ತಾಂತ್ರಿಕ ಮಹಾ ವಿದ್ಯಾಲಯ ಅಡ್ಯಾರ್, ಮಂಗಳೂರು ಇವರು ವನ ಮಹೋತ್ಸವದ ಬಗ್ಗೆ

ಮಾಹಿತಿಯನ್ನು ನೀಡಿದರು.ಸಂಘದ ವತಿಯಿಂದ ಪೊಳಲಿ ಪರಿಸರದಲ್ಲಿ ಗಿಡ ನೆಟ್ಟು ಜಾಗೃತಿ ಮೂಡಿಸಲಾಯಿತು. 

ವೇದಿಕೆಯಲ್ಲಿ ಅಜಿತ್ ಕುಮಾರ್ ಪೊಳಲಿ, ವೆಂಕಟೇಶ ನಾವಡ ಪೊಳಲಿ, ಯಶವಂತ ಕೋಟ್ಯಾನ್, ಉದ್ಯಮಿ ಭುವನೇಶ್ ಪಚಿನಡ್ಕ, ಬಾಲಕೃಷ್ಣ ಪಿ, ಮೋಹನ್ ದಾಸ್ ಪೊಳಲಿ, ರಾಜೇಶ್ ಪಡ್ಪು, ರಂಜಿತಾ ಮತ್ತಿತರು ಉಪಸ್ಥಿತರಿದ್ದರು.

ಯಕ್ಷ ಸಂಘಟಕ ಬಿ ಜನಾರ್ದನ ಅಮುಂಜೆ ಸ್ವಾಗತಿಸಿ, ಧನ್ಯವಾದವಿತ್ತು ಕಾರ್ಯಕ್ರಮ ನಿರೂಸಿದರು.

Leave a Comment