ತುಂಬೆ-ಪುದು : ತೀಯಾ ಸಮಾಜ ಸೇವಾ ಸಮಿತಿ ವಾರ್ಷಿಕ ವಿಶೇಷ ಸಭೆ ಹಾಗೂ ವಿಧ್ಯಾರ್ಥಿ ಪ್ರತಿಭಾ ಪುರಸ್ಕಾರ.

Coastal Bulletin
ತುಂಬೆ-ಪುದು : ತೀಯಾ ಸಮಾಜ ಸೇವಾ ಸಮಿತಿ ವಾರ್ಷಿಕ ವಿಶೇಷ ಸಭೆ ಹಾಗೂ ವಿಧ್ಯಾರ್ಥಿ ಪ್ರತಿಭಾ ಪುರಸ್ಕಾರ.

ಬಂಟ್ವಾಳ :ಉಳ್ಳಾಲ ಶ್ರೀ ಭಗವತಿ ತೀಯಾ ಸಮಾಜ ಸೇವಾ ಸಮಿತಿ ತುಂಬೆ ಪುದು ಇದರ ವಾರ್ಷಿಕ ವಿಶೇಷ ಸಭೆ ಹಾಗೂ ವಿಧ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸುರೇಶ್ ಸುವರ್ಣ ಕುಮ್ಡೇಲ್ ಇವರ ಶ್ರೀ ಸಾನಿಧ್ಯದಲ್ಲಿ ಜು 27ರಂದು ಆದಿತ್ಯವಾರ ನಡೆಯಿತು.

ವೇದಿಕೆಯಲ್ಲಿ ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಅರ್ಚಕರಾದ ಅಪ್ಪು ಆತಾರ್, ಆಡಳಿತ ಮೊಕ್ತೇಸರರಾದ ಸುರೇಶ್ ಭಟ್ನಗರ್, ಅಧ್ಯಕ್ಷರಾದ ಚಿದಾನಂದ ಗುರಿಕಾರ ನಂದ್ಯ,ಪುಣೆಯ ಜಯಶ್ರೀ ಪಾಲ್, ಸಮಿತಿಯ ಅಧ್ಯಕ್ಷ ಮೋಹನ್ ಬಿ ತುಂಬೆ, ಗೌರವಾಧ್ಯಕ್ಷರಾದ ರಾಮಚಂದ್ರ ಬಂಗೇರ ಮಾರಿಪಳ್ಳ, ಕಾರ್ಯದರ್ಶಿ ಹರೀಶ್ ಬಜಾಲ್, ಯಕ್ಷಗಾನ ಸಮಿತಿ ಅಧ್ಯಕ್ಷ ಜಗದೀಶ್ ಸುವರ್ಣ ಕುಮ್ಡೇಲ್,ಗೌರವ ಸಲಹೆಗಾರರಾದ ದಯಾನಂದ ಸುವರ್ಣ ದರ್ಖಾಸು, ಸದಾಶಿವ ಡಿ ತುಂಬೆ,ನಾಗಪ್ಪ ಅಡ್ಯಾರ್, ಉಮೇಶ್ ಸಾಲ್ಯಾನ್ ಬೆಂಜನಪದವು ಮತ್ತು ಸುರೇಶ್ ಸುವರ್ಣ ಕುಮ್ಡೇಲ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ 4 ಮಂದಿ ಹಾಗೂ ಪಿ ಯು ಸಿ ಯಲ್ಲಿ 7 ಮಂದಿಗೆ ವಿಶೇಷ ಅಂಕಗಳಿಗಾಗಿ ಸನ್ಮಾನ ಗೌರವ ಸಮರ್ಪಿಸಲಾಯಿತು. ಬಿ ಎಸ್ ಡಬ್ಲ್ಯೂ ದಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿನಿಗೆ

ವೈಯಕ್ತಿಕವಾಗಿ ಸುರೇಶ್ ಸುವರ್ಣ ಕುಮ್ಡೇಲ್ ಲ್ಯಾಪ್ ಟಾಪ್ ನೀಡಿ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡಿದರು.

ಸಮಿತಿಯ ಈ ಸೇವಾ ಕಾರ್ಯಗಳು ಇತರ ಗ್ರಾಮ ಸಮಿತಿಗಳಿಗೆ ಮಾದರಿ ಆಗಲಿ ಎಂದು ಸುರೇಶ್ ಭಟ್ನಗರ್ ಶುಭ ಹಾರೈಸಿದರು. ಅಪ್ಪು ಆತಾರ್ ಭಗವತಿ ಮಾತೆಯಲ್ಲಿ ಪ್ರಾರ್ಥಿಸಿ ಹರಸಿದರು. ಚಿದಾನಂದ ಗುರಿಕಾರ ನಂದ್ಯ ಇವರು ಉಳ್ಳಾಲ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಾಜದ ಪ್ರತಿಯೊಬ್ಬರು ಸೇವೆ ಸಲ್ಲಿಸಲು ಕರೆ ನೀಡಿದರು. ಸಂಘದ ಅಧ್ಯಕ್ಷ ಮೋಹನ್ ಬಿ ತುಂಬೆ ಮಾತನಾಡಿ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ,ಮರಣ ಫಂಡ್ ನೆರವು,ಇತರ ಕಾರ್ಯಗಳಿಗೆ ತೀಯಾ ಸಮಾಜದ ಸರ್ವರ ಸಹಕಾರ ಅಗತ್ಯ ಎಂದು ಹೇಳಿದರು.

 ಕು.ಮೇಘನಾ, ಕಾವ್ಯಶ್ರೀ, ಪ್ರಿಯಾ ಪ್ರಾರ್ಥನೆ ಮಾಡಿದರು. ಜಗದೀಶ್ ಕಡೆಗೋಳಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ತುಂಬೆ ಪುದು ಕೊಡ್ಮಾಣ್ ಮೇರಮಜಲು ಗ್ರಾಮದ ತೀಯಾ ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Comment