ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್ ಇಲ್ಲಿಗೆ ಜಿಲ್ಲಾ ಗವರ್ನರ್ ಎ.ಆರ್. ರವೀಂದ್ರ ಭಟ್ ಅವರ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು. ಗವರ್ನರ್ ಅವರನ್ನು ಸ್ವಾಗತಿಸಿ ತೆರೆದ ವಾಹನದಲ್ಲಿ ಸಭಾಂಗಣಕ್ಕೆ ಕರೆ ತರಲಾಯಿತು. ನೂತನವಾಗಿ ನಿರ್ಮಾಣಗೊಂಡ ಕ್ಲಬ್ ನ ಮೇಲಂತಸ್ತಿನ ಸಭಾಂಗಣವನ್ನು ಗವರ್ನರ್ ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ, ಕ್ರೀಡಾಪಟು ಕೀರ್ತೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಹಾಯಕ ಗವರ್ನರ್ ಸುರೇಂದ್ರ ಕಿಣಿ,ನಿಯೋಜಿತ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಮಾತನಾಡಿದರು.. ಕ್ಲಬ್ ನ ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಆಕಾಶ್ ಮತ್ತಿತರರನ್ನು ಗೌರವಿಸಲಾಯಿತು.
ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗವರ್ನರ್ ಎ.ಆರ್. ರವೀಂದ್ರಭಟ್ ಅವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಗವರ್ನ
ರ್ ರವೀಂದ್ರ ಭಟ್ ಅವರು ಮಾತನಾಡಿ ಸಮಾಜಕ್ಕೆ ಅಗತ್ಯವಾಗಿ ಬೇಕಾಗುವ ಹಲವಾರು ಯೋಜನೆಗಳನ್ನು ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ನವರು ಮಾಡಿದ್ದಾರೆ. ಇದೊಂದು ಅಭಿನಂದನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಲಯ ಕಾರ್ಯದರ್ಶಿ ಜಯರಾಮ ರೈ, ವಲಯ ಲೆಫ್ಟಿನೆಂಟ್ ಅವಿಲ್ ಮಿನೇಜಸ್, ನಿಕಟಪೂರ್ವ ಅಧ್ಯಕ್ಷ ಅಂತೋನಿ ಸಿಕ್ವೇರ, ನಯನತಾರಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯದರ್ಶಿ ರಮೇಶ್ ನಾಯಕ್ ವಂದಿಸಿ, ಸದಸ್ಯ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.














