Coastal Bulletin

ಬಂಟ್ವಾಳ: ಪುಂಜಾಲಕಟ್ಟೆ ಮಂತ್ರದೇವತೆ ಕ್ರಿಯೇಶನ್‌ನ ಚೊಚ್ಚಲ ನಿರ್ಮಾಣದ ಕಿರು ಚಿತ್ರ ಚಂದ್ರನ್ ಇದರ ಬಿಡುಗಡೆ ಕಾರ್ಯಕ್ರಮ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಡೆಯಿತು.

ಜಿ.ಪಂ.ಮಾಜಿ ಸದಸ್ಯ, ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಕಿರು ಚಿತ್ರವನ್ನು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಕಿರುಚಿತ್ರದ ಪ್ರದರ್ಶನ ನಡೆಯಿತು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ನಮ್ಮೂರಿನ ಯುವ ಪ್ರತಿಭೆಗಳು ನಿರ್ಮಿಸಿದ ಕಿರು ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಶೀಘ್ರ ಚಂದ್ರನ್ 2 ಕೂಡಾ ನಿರ್ಮಾಣವಾಗಲಿ. ಯುವಕರ ಪ್ರಯತ್ನಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಶುಭ ಹಾರೈಸಿದರು.

ಚಲನಚಿತ್ರ ನಟ, ರಂಗಭೂಮಿ ರಮೇಶ್ ರೈ ಕುಕ್ಕುವಳ್ಳಿ ಅವರು ಮಾತನಾಡಿ, ಗ್ರಾಮೀಣ ಕಲಾವಿದರಿಗೆ ಚಲನಚಿತ್ರದಲ್ಲಿ ಹೆಚ್ಚು ಅವಕಾಶ ದೊರಕುವಂತಾಗಬೇಕು ಎಂದರು.ಚಲನ ಚಿತ್ರ ನಟಿ ಶೈಲಶ್ರೀ ಮೂಲ್ಕಿ ಅವರು ಮಾತನಾಡಿ, ಚಂದ್ರನ್ ತಂಡ ವೃತ್ತಿಪರರ ರೀತಿಯಲ್ಲಿ ಬಹಳ ಮುತುವರ್ಜಿಯಲ್ಲಿ ಕಾರ್ಯ ನಿರ್ವಹಿಸಿರುವುದು ಕಿರು ಚಿತ್ರದಲ್ಲಿ ಎದ್ದು ಕಾಣುತ್ತಿದೆ ಎಂದು ಹೇಳಿದರು.

ರಂಗಭೂಮಿ ನಟ ರಾಜೇಶ್ ಕಣ್ಣೂರು, ಚಲನ ಚಿತ್ರ ನಿರ್ದೇಶಕ ಕಿಶೋರ್ ಮೂಡುಬಿದಿರೆ, ಉದ್ಯಮಿ ಹರೀಂದ್ರ ಪೈ ಅವರು ಶುಭ ಹಾರೈಸಿದರು.

ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್

ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ , ಕೋಶಾಧಿಕಾರಿ ರಾಜೇಶ್ ಪಿ., ರಂಗನಟ ಅರುಣ್ ಶೆಟ್ಟಿ ಪೇಜಾವರ, ಚಿತ್ರ ತಂಡದ ಕುಶಲ್ ಗೌಡ ಹೊಸಮನೆ, ರಕ್ಷಿತ್ ರೈ, ಬಾತು ಕುಲಾಲ್, ಜಯರಾಜ್ ಅತ್ತಾಜೆ, ಸಚಿನ್ ಅತ್ತಾಜೆ ಮತ್ತಿತರರು ಉಪಸ್ಥಿತರಿದ್ದರು.  ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಕಿರುಚಿತ್ರದ ಕಥೆ ಕುಶಲ್ ಗೌಡ ಹೊಸಮನೆ, ರಕ್ಷಿತ್ ರೈ ಪುಂಜಾಲಕಟ್ಟೆ ನಿರ್ದೇಶನದಲ್ಲಿ ,ಜಯರಾಜ್ ಅತ್ತಾಜೆ ಮತ್ತು ಸಚಿನ್ ಅತ್ತಾಜೆ ಸಹ ನಿರ್ದೇಶನದಲ್ಲಿ ,ಗುರು ಬಾಯಾರು ಸಂಗೀತವಿದ್ದು , ಸವ್ಯರಾಜ್ ಕಲ್ಲಡ್ಕ ಅವರ ಪ್ರಸಾಧನವಿದೆ. ಕ್ರಿಯೇಟಿವ್ ಕ್ಯಾಮೆರಾಮೆನ್ ಬಾತು ಕುಲಾಲ್ ಛಾಯಾಗ್ರಹಣ ಮತ್ತು ಸಂಕಲನ ಮಾಡಿರುವ ಕಿರು ಚಿತ್ರದಲ್ಲಿ ಒಟ್ಟು 45 ಮಂದಿ ಅಭಿನಯಿಸಿದ್ದು, ಚಲನಚಿತ್ರ ನಟ ಡಿ.ಎಸ್. ಬೋಳೂರು, ರತ್ನದೇವ್ ಪುಂಜಾಲಕಟ್ಟೆ , ಜಯರಾಜ್ ಅತ್ತಾಜೆ, ಸಚಿನ್ ಅತ್ತಾಜೆ, ನಮಿತಾ ಸುವರ್ಣ, ಜಗದೀಶ ಮತ್ತಿತರರು ಅಭಿನಯಿಸಿರುವರು.

ಪ್ರಸ್ತುತ ಚಂದ್ರನ್ ಕಿರು ಚಿತ್ರ ಯೂ ಟ್ಯೂಬ್‌ನಲ್ಲಿ ಬಿಡುಗಡೆಗೊಂಡಿದ್ದು, ಸಖತ್ ವೈರಲ್ ಆಗುತ್ತಿದ್ದು, ಹೊಸ ಸಂಚಲನ ಮೂಡಿಸಿದೆ.

Leave a Comment