ಬಂಟ್ವಾಳ: ರಕ್ಷಕರು ಹಾಗೂ ಶಿಕ್ಷಕರ ಬಾಂಧವ್ಯವು ಸದೃಢವಾಗಿದ್ದಾಗ ವಿದ್ಯಾರ್ಥಿಗಳ ಅಭಿವೃದ್ಧಿ ಕಾಣಲು ಸಾಧ್ಯ. ಹಳೇ ವಿದ್ಯಾರ್ಥಿಗಳ ಅಭಿಮಾನವು ಶಾಲಾ-ಕಾಲೇಜುಗಳ ಕ್ರಿಯಾತ್ಮಕ ಚಟುವಟಿಕೆಗಳಿಗೆ ಪೂರಕವಾಗುತ್ತದೆ. ಈ ನಿಟ್ಟಿನಲ್ಲಿ ಕ್ರೀಡಾಕೂಟವು ಬಹಳ ಮಹತ್ವ ಪಾತ್ರ ವಹಿಸುತ್ತದೆ ಎಂದು ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ. ಅಬ್ದುಲ್ ಸಲಾಂ ಹೇಳಿದರು. ಅವರು ತುಂಬೆ ಬಿ. ಎ. ವಿದ್ಯಾಸಂಸ್ಥೆಗಳ ರಕ್ಷಕ-ಶಿಕ್ಷಕ ಹಾಗೂ ಹಳೇ ವಿದ್ಯಾರ್ಥಿಗಳ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಿ ಪಂ ಮಾಜಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ,ಎಲ್ಲಾ ರಕ್ಷಕರು, ಹಳೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜಾತಿ-ಮತ-ಬೇಧ ಮರೆತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಭಾವೈಕ್ಯತೆಯ ಸಂಕೇತವಾಗಿದ್ದು ಇದು ಶ್ಲಾಘನೀಯ ಎಂದರು.
ತುಂಬೆ ಗ್ರಾ ಪಂ ಉಪಾಧ್ಯಕ್ಷ ಗಣೇಶ್ ಸಾಲಿಯನ್, ಸದಸ್ಯ ಝಹೂರ್, ಮೊಡಂಕಾಪು ಇನ್ಸೆಂಟ್ ಜೀಸಸ್ ಚರ್ಚ್ ಉಪಾಧ್ಯಕ್ಷ ಜೀವನ್ ಸುನಿಲ್ ವೇಗಸ್,
ಹಿರಿಯ ವಿದ್ಯಾರ್ಥಿ ಇಂಜಿನಿಯರ್ ಅರ್ಜುನ್ ಕೆ. ಪೂಂಜಾ, ಉದ್ಯಮಿ ಇಸಾಕ್ ತುಂಬೆ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.
ಪಿ.ಟಿ.ಎ ಅಧ್ಯಕ್ಷ ನಿಸಾರ್ ಅಹಮ್ಮದ್ ವಳವೂರು, ಉಪಾಧ್ಯಕ್ಷೆ ಮೋಹಿನಿ ಸುವರ್ಣ, ಮ್ಯಾನೇಜರ್ ಅಬ್ದುಲ್ ಕಬೀರ್, ಪಿಇಡಿ ಸಾಯಿರಾಂ ಜೆ ನಾಯಕ್, ಪಿಇಟಿ ಮೋಲಿ ಎಡ್ಯಾ ಮತ್ತಿತರರು ಉಪಸ್ಥಿತರಿದ್ದರು.ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ ಬಿ. ನಿರೂಪಿಸಿದರು














