ಬಂಟ್ವಾಳ : ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನಕ್ಕೆ ಸಮರ್ಪಣೆಗೊಳ್ಳಲಿರುವ ಧ್ವಜಸ್ತಂಭ(ಕೊಡಿಮರ) ಮೆರವಣಿಗೆಗೆ ಬಿ.ಸಿ.ರೋಡು ಬಸ್ತಿಪಡ್ಪು ಮೈದಾನದಲ್ಲಿ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಭಾನುವಾರ ಚಾಲನೆ ನೀಡಿದರು.
ಇಲ್ಲಿನ ಇತಿಹಾಸ ಪ್ರಸಿದ್ಧ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನಕ್ಕೆ ಸಮರ್ಪಣೆಗೊಳ್ಳಲಿರುವ ಧ್ವಜಸ್ತಂಭ(ಕೊಡಿಮರ) ಮೆರವಣಿಗೆಗೆ ಬಿ.ಸಿ.ರೋಡು ಬಸ್ತಿಪಡ್ಪು ಮೈದಾನದಲ್ಲಿ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಭಾನುವಾರ ಚಾಲನೆ ನೀಡಿದರು. ಕೊಡಿಮರವು ದೇವಸ್ಥಾನದಲ್ಲಿ ದೇವರ ಶಕ್ತಿ ಸ್ಥಿರವಾಗಿ ನಿಲ್ಲುವ ಪ್ರತೀಕವಾಗಿದ್ದು, ಮುಂದಿನ 2023ರ ಒಳಗೆ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶ ನೆರವೇರಿಸಲು ಭಕ್ತರು ಸಂಘಟಿತ ಪ್ರಯತ್ನ ನಡೆಸಬೇಕು ಎಂದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಭವಾನಿ ಶಿಪ್ಪಿಂಗ್ಸ್ ಸಂಸ್ಥೆ ಮುಖ್ಯಸ್ಥ ಕುಸುಮೋಧರ ಡಿ.ಶೆಟ್ಟಿ, ಜೀರ್ಣೋದ್ದಾರ ಸಮಿತಿ ಸಂಚಾಲಕ ಡಾ. ಎಂ.ಮೋಹನ್ ಆಳ್ವ ಶುಭ ಹಾರೈಸಿದರು.
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ರಮಾನಾಥ ರೈ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪಿ.ಜಯಾನಂದ, ಉದ್ಯಮಿ ಸಂಜೀವ ಪೂಜಾರಿ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ, ಆಡಳಿತ ಸಮಿತಿ ಅಧ್ಯಕ್ಷ ವಿಠಲ ಎಂ.ಆರುಮುಡಿ,
ಬಾಚಕೆರೆ ಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ಪ್ರಮುಖರಾದ ಬಿ. ಪದ್ಮಶೇಖರ್ ಜೈನ್, ಚಂದ್ರಪ್ರಕಾಶ ಶೆಟ್ಟಿ, ಡಾ. ಸತ್ಯಶಂಕರ್ ಶೆಟ್ಟಿ, ಡಾ. ಶಿವಪ್ರಸಾದ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ರಂಗೋಲಿ, ಚಂದ್ರಶೇಖರ ಶೆಟ್ಟಿ, ದಯಾನಂದ ಶೆಟ್ಟಿ ಅಮೈ, ರಾಧಾಕೃಷ್ಣ ಮಯ್ಯ, ಮೋಹನದಾಸ ಶೆಟ್ಟಿ, ಪ್ರವೀಣ್ ಕಿಣಿ, ರತ್ನಾಕರ ಭಟ್ ಸರಪಾಡಿ, ರತ್ನಾಕರ ಶೆಟ್ಟಿ, ಮಹಾಬಲ ಆಳ್ವ ಕಮ್ಮಾಜೆ, ಪ್ರಕಾಶ್ ಶೆಟ್ಟಿ ತುಂಬೆ, ರಮಾನಾಥ ಕಾರಂದೂರು, ಸಂತೋಷ್ ಕುಮಾರ್ ಶೆಟ್ಟಿ, ಸುದರ್ಶನ್ ಬಜ, ಪ್ರಕಾಶ ಆಳ್ವ, ಲೋಕೇಶ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಪ್ರಾರ್ಥಿಸಿದರು. ಆರ್ಥಿಕ ಸಮಿತಿ ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ಸರಪಾಡಿ ಸ್ವಾಗತಿಸಿ, ವಂದಿಸಿದರು.
ಸಂಚಾರ ಸುಗಮಗೊಳಿಸಿದ ಮಾಜಿ ಸಚಿವ ಶೆಟ್ಟಿ.
ಈ ಕೊಡಿಮರ ಮೆರವಣಿಗೆ ವೇಳೆ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತ ಬಳಿ ಕೆಲಹೊತ್ತು ಉಂಟಾದ ವಾಹನದಟ್ಟಣೆ ತಡೆಯಲು ಸಂಚಾರಿ ಪೊಲೀಸರು ಇರಲಿಲ್ಲ. ಇದನ್ನು ಮನಗಂಡ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಹೆದ್ದಾರಿಯಲ್ಲಿ ನಿಂತು ಸಂಚಾರ ಸುಗಮಗೊಳಿಸಿ ಗಮನ ಸೆಳೆದರು.














