ಬಂಟ್ವಾಳ : ತಾಲ್ಲೂಕಿನ ನರಿಕೊಂಬು ಗ್ರಾಮದ ಮಾಣಿಮಜಲು ಜೋಡುಸ್ಥಾನ ಶ್ರೀ ನಾಲ್ಕೈತ್ತಾಯ- ಪಂಜುರ್ಲಿ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಲಶಾಭಿಷೇಕ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಆರ್ ಎಸ್.ಎಸ್.ಮುಖಂಡ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ ಧಾರ್ಮಿಕ ಉಪನ್ಯಾಸ ನೀಡಿದರು.
ಜಗತ್ತಿಗೆ ಒಳಿತು ಬಯಸುವ ಹಿಂದೂ ಸಮಾಜಕ್ಕೆ ಈ ಹಿಂದಿನಂತೆ ವಿವಿಧ ರೀತಿಯ ಆಮಿಷ ಮತ್ತು ಬಲವಂತದ ಮತಾಂತರ ದೊಡ್ಡ ಶಾಪವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿರುವುದು ಸ್ವಾಗತಾರ್ಹ ಎಂದು ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ. ಇಲ್ಲಿನ ನರಿಕೊಂಬು ಗ್ರಾಮದ ಮಾಣಿಮಜಲು ಜೋಡುಸ್ಥಾನ ಶ್ರೀ ನಾಲ್ಕೈತ್ತಾಯ- ಪಂಜುರ್ಲಿ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಲಶಾಭಿಷೇಕ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ದೇಶದಲ್ಲಿ ಅಯೋಧ್ಯೆ, ಕಾಶಿ ಕ್ಷೇತ್ರ ಪುನರುತ್ಥಾನಗೊಂಡಂತೆ ತುಳುನಾಡಿನಲ್ಲಿ ಮಾಣಿಮಜಲು ದೈವಸ್ಥಾನ ಜೀರ್ಣೋದ್ದಾರಗೊಂಡಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಕ್ಷೇತ್ರದ ಕಚೇರಿ ಉದ್ಘಾಟಿಸಿ ಶುಭ ಹಾರೈಸಿದರು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಪರಸ್ಪರ ಪ್ರೀತಿ ಮತ್ತು ಇತರ ಧರ್ಮಗಳನ್ನು ಗೌರವಿಸುವುದೇ ನೈಜ ಸನಾತನ ಹಿಂದೂ ಸಂಸ್ಕೃತಿ ಎಂದರು.
ಇದೇ ವೇಳೆ ರೂ 10 ಲಕ್ಷ ವೆಚ್ಚದಲ್ಲಿ
ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಉದ್ಘಾಟಿಸಿದರು. ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಧಾರ್ಮಿಕ ಕ್ಷೇತ್ರಗಳಲ್ಲಿ ನಮಗೆ ಉತ್ತಮ ಸಂಸ್ಕಾರ ಮತ್ತು ಧಾರ್ಮಿಕತೆ ಸಿಗುತ್ತದೆ ಎಂದರು.
ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಬಿ.ರಘುನಾಥ ಸೋಮಯಾಜಿ ಅಂಗಡಿ ಮಳಿಗೆ ಉದ್ಘಾಟಿಸಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನಿತಾ ಪುರುಷೋತ್ತಮ, ಮಾಜಿ ಅಧ್ಯಕ್ಷ ಯಶೋಧರ ಕರ್ಬೇಟ್ಟು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕಮಾಲಾಕ್ಷಿ ಪೂಜಾರಿ, ಎಂ.ತುಂಗಪ್ಪ ಬಂಗೇರ, ಜೀಣರ್ೊದ್ಧಾರ ಸಮಿತಿ ಅಧ್ಯಕ್ಷ ಎನ್.ಪ್ರಕಾಶ ಕಾರಂತ, ಗೌರವಾಧ್ಯಕ್ಷ ಬಿ.ರಘು ಸಪಲ್ಯ, ಸಂಚಾಲಕ ಎನ್. ಪದ್ಮನಾಭ ಮಯ್ಯ, ಪ್ರಮುಖರಾದ ರಮೇಶ್ ಬೋರುಗುಡ್ಡೆ, ಪ್ರೇಮನಾಥ ಶೆಟ್ಟಿ ಅಂತರ, ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಕೊರಗಪ್ಪ ಬಂಗೇರ ಕೆದ್ದೇಲು, ನಿತಿನ್ ಶೆಟ್ಟಿ, ಉದಯಕುಮಾರ್ ಶೆಟ್ಟಿ ಹೊಸಲಚ್ಚಿಲ್, ಮಾಜಿ ಜಿಪಂ ಸದಸ್ಯ ತುಂಗಪ್ಪ ಬಂಗೇರ ಇದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಗಾಣಿಗ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.














