ನೆತ್ತರಕೆರೆ :ನವೋದಯ ಮಿತ್ರ ಕಲಾವೃಂದ ಆಶ್ರಯದಲ್ಲಿ ರಕ್ತದಾನ ಶಿಬಿರ

Coastal Bulletin
ನೆತ್ತರಕೆರೆ :ನವೋದಯ ಮಿತ್ರ ಕಲಾವೃಂದ ಆಶ್ರಯದಲ್ಲಿ ರಕ್ತದಾನ ಶಿಬಿರ

ಬಂಟ್ವಾಳ : ನವೋದಯ ಮಿತ್ರ ಕಲಾವೃಂದ (ರಿ.) ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ, ಸೇವಾ ಭಾರತೀ ಬಂಟ್ವಾಳ, ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಇದರ ಸಂಯುಕ್ತ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ "ರಕ್ತದಾನ ಶಿಬಿರ" ಸೆ.27ನೇ ಆದಿತ್ಯವಾರ ನೆತ್ತರಕೆರೆ ವಸಂತಿ ವಿಠ್ಠಲ ಶೆಟ್ಟಿ ಸಭಾಂಗಣದಲ್ಲಿ ನಡೆಯಿತು.


ಭಾರತ ಮಾತೆಗೆ ದೀಪ ಬೆಳಗಿಸಿ ಪುಷ್ಪಾ ರ್ಚನೆ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು,

ಪ್ರಮುಖರಾದ ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಜಗದೀಶ ಎನ್, ಸೇವಾ ಭಾರತೀ ಬಂಟ್ವಾಳ ಇದರ ಪ್ರ. ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಗ್ರಾಮ ವಿಕಾಸ ಪ್ರತಿಷ್ಠಾನದ ಸಂಯೋಜಕ ಸಂತೋಷ ಕುಮಾರ್, ನೇತ್ರಾವತಿ ಮಾತೃ ಮಂಡಳಿಯ ಅಧ್ಯಕ್ಷೆ ಸುಶೀಲ ಶೇಖರ್, ಕೆ ಎಂ ಸಿ ಹಾಸ್ಪಿಟಲ್ ವೈದ್ಯಧಿಕಾರಿಗಳಾದ

ಡಾ ಸೋನಾಲಿ, ಡಾ ಸೇಲಿನಾ, ಗೌರವಾಧ್ಯಕ್ಷ ಪಿ ಸುಬ್ರಮಣ್ಯ ರಾವ್, ಮಾಜಿ ಅಧ್ಯಕ್ಷ ಬಿ ಸುರೇಶ ಭಂಡಾರಿ ಅರ್ಬಿ ಮತ್ತಿತರರು ಉಪಸ್ಥಿತರಿದ್ದರು.


ನವೋದಯ ಮಿತ್ರ ಕಲಾ ವೃಂದದ ಉಪಾಧ್ಯಕ್ಷ ಸಂತೋಷ್ ಕುಲಾಲ್ ನೆತ್ತರಕೆರೆ ಸ್ವಾಗತಿಸಿ, ಧನ್ಯವಾದವಿತ್ತು ಕಾರ್ಯಕ್ರಮ ನಿರೂಪಿಸಿದರು. ಪ್ರ. ಕಾರ್ಯದರ್ಶಿ ಮಹೇಶ್ ಎನ್, ಕೋಶಾಧಿಕಾರಿ ರಂಜಿತ್ ಸಹಕರಿಸಿದರು ಸುಮಾರು 65 ದಾನಿಗಳು ರಕ್ತದಾನ ಮಾಡಿದರು.


Leave a Comment