ಅಮ್ಮುಂಜೆ: ವೀರ ಯೋಧ ಯಾಧವ ಫ್ರೆಂಡ್ಸ್ ಅಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ ಹಾಗೂ ವಿದ್ಯಾರ್ಥಿ ವೇತನ ವಿತರಣೆ. ಆಹಾರವೇ ಔಷಧಿಯಾಗುವಂತಿರಬೇಕು:ಡಿ ಎ ಅಬೂಬಕ್ಕರ್ ಅಮ್ಮುಂಜೆ

Coastal Bulletin
ಅಮ್ಮುಂಜೆ: ವೀರ ಯೋಧ ಯಾಧವ ಫ್ರೆಂಡ್ಸ್ ಅಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ ಹಾಗೂ ವಿದ್ಯಾರ್ಥಿ ವೇತನ ವಿತರಣೆ. ಆಹಾರವೇ ಔಷಧಿಯಾಗುವಂತಿರಬೇಕು:ಡಿ ಎ ಅಬೂಬಕ್ಕರ್ ಅಮ್ಮುಂಜೆ

ಬಂಟ್ವಾಳ :ವೀರ ಯೋಧ ಯಾಧವ ಫ್ರೆಂಡ್ಸ್ (ರಿ.) ಅಮ್ಮುಂಜೆ ವೀರ ಯೋಧ ಯಾಧವ ಫ್ರೆಂಡ್ಸ್ ಮಹಿಳಾ ಘಟಕ, ಅಮ್ಮುಂಜೆ ಇದರ ಆಶ್ರಯದಲ್ಲಿ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಅಂಡ್ ರಿಸರ್ಚ್ ಸೆಂಟರ್ ಮಂಗಳೂರು ಇವರ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಸೆ.27ನೇ ಆದಿತ್ಯವಾರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಮ್ಮುಂಜೆ ಇದರ ಸಭಾಭವನದಲ್ಲಿ ನಡೆಯಿತು.


ಉಚಿತ ವೈದ್ಯಕೀಯ ಶಿಬಿರವನ್ನು ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿ ಬಂಟ್ವಾಳ ತಾಲೂಕು ರೈತರ ಸಲಹಾ ಸಮಿತಿ ಅಧ್ಯಕ್ಷ ಡಿ ಎ ಅಬೂಬಕ್ಕರ್ ಅಮ್ಮುಂಜೆ ಮಾತನಾಡಿ, ಕಲುಷಿತ ಆಹಾರ ಹಾಗೂ ಪರಿಸರದಿಂದ ಜನರ ಆರೋಗ್ಯ ಹದಗೆಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಒತ್ತಡಮುಕ್ತ ಜೀವನ ನಡೆಸಬೇಕು. ನಮಗೆ ಔಷಧಿಯೇ ಆಹಾರವಾಗದೆ, ಆಹಾರವೇ ಔಷಧಿಯಾಗುವಂತಿರಬೇಕು. ದೇಶ ಸೇವೆ ಮಾಡಿದ ವೀರ ಯೋಧ ಯಾದವರ ಹೆಸರಿನಲ್ಲಿ ಸಮಾಜಮುಖಿ ಸೇವೆಗಳನ್ನು ಮಾಡುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.


ಅಮ್ಮುಂಜೆ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದ ಆಡಳಿತ ಮುಕ್ತೇಸರ ಡಿ ಎ ನಾಗೇಶ ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ ಅಮ್ಮುಂಜೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಉದ್ಯಮಿ ಬಿ

ಮಹಮ್ಮದ್ ಬಟ್ಲಬೆಟ್ಟು,ಅಮ್ಮುಂಜೆ ಶಾಲೆಯ ಮುಖ್ಯೋಪಾಧ್ಯಾಯ ಡಿ ಎ ಹರೀಶ್ ರಾವ್,ವೀರ ಯೋಧ ಯಾದವರ ಸಹೋದರ ಉಮೇಶ್ ಪೂಜಾರಿ,ವೀರ ಯೋಧ ಯಾಧವ ಫ್ರೆಂಡ್ಸ್ ನ ಗೌರವಾಧ್ಯಕ್ಷ ದೇವದಾಸ ಹೆಗ್ಡೆ ಅಮ್ಮುಂಜೆಗುತ್ತು, ಎ ಕರುಣಾಕರ ಆಳ್ವ,  ಮಹಿಳಾ ಘಟಕದ ಗೌರವಾಧ್ಯಕ್ಷರಾದ ಹೇಮಲತಾ ಎನ್ ರಾವ್, ವಿಜಯಲಕ್ಷ್ಮಿ ಬಲ್ಲಾಳ್, ಅಧ್ಯಕ್ಷೆ ಚೇತನಾ ಹೆಚ್ ರಾವ್, ಎ ಜೆ ಹಾಸ್ಪಿಟಲ್ ವೈದ್ಯಧಿಕಾರಿ ಡಾ ಮಿಥಾಲಿ, ಅಮ್ಮುಂಜೆ ಶ್ರೀ ವಿನಾಯಕ ಭಜನಾ ಮಂಡಳಿಯ ಪ್ರ ಕಾರ್ಯದರ್ಶಿಬಾಲಕೃಷ್ಣ ಕೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ವೀರ ಯೋಧ ಯಾಧವ ಫ್ರೆಂಡ್ಸ್ ನ  ಅಧ್ಯಕ್ಷರಾದ ಪ್ರಸಾದ್ ಕೆ ಸ್ವಾಗತಿಸಿ,ಶ್ರೀಮಹಿ  ಭಜನಾ ತಂಡದ ಸದಸ್ಯೆಯರು ಪ್ರಾರ್ಥಿಸಿ,ಯಕ್ಷ ಸಂಘಟಕ ಬಿ ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು

ಬಳಿಕ  ಉಚಿತ ವಿವಿಧ ಆರೋಗ್ಯ ತಪಾಸಣೆಗಳ ಸೌಲಭ್ಯಗಳಾದ ಕಣ್ಣು, ಕಿವಿ–ಮೂಗು–ಗಂಟಲು, ಇ.ಸಿ.ಜಿ. ರಕ್ತದಲ್ಲಿನ ಸಕ್ಕರೆ ಪರೀಕ್ಷೆ ಹಾಗೂ ಸಾಮಾನ್ಯ ವೈದ್ಯಕೀಯ ತಪಾಸಣೆ ನಡೆಯಿತು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.


Leave a Comment