ಬಂಟ್ವಾಳ :ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ, ನವೋದಯ ಮಿತ್ರ ಕಲಾ ವೃಂದ (ರಿ) ಹಾಗೂ ನೇತ್ರಾವತಿ ಮಾತ್ರ ಮಂಡಳಿ ನೆತ್ತರಕೆರೆ ಇದರ ಸಂಯುಕ್ತ ಆಶಯದಲ್ಲಿ ಊರ ದಾನಿಗಳ ಸಹಕಾರದಿಂದ ಅರ್ಧದಲ್ಲೇ ಸ್ಥಗಿತಗೊಂಡಿದ್ದ ಬಡ ಕುಟುಂಬದ ಮನೆಯನ್ನು ಸುಮಾರು 2.5 ಲಕ್ಷ ವೆಚ್ಚದಲ್ಲಿ ದುರಸ್ತಿ ಮಾಡಿ,ಪೂರ್ಣ ಗೊಳಿಸಿ ಜೂನ್ 25ರಂದು ಆದಿತ್ಯವಾರ ಹಸ್ತಾಂತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪೊಳಲಿ ಶ್ರೀ ರಾಮಕೃಷ್ಣ ತಪೋವದ ಪೂಜ್ಯ ವಿವೇಕ ಚೈತನ್ಯಾನಂದ ಸ್ವಾಮೀಜಿ ಹಾಗೂ ರಾಧಾ ಸುರಭಿ ಗೋ ಮಂದಿರದ ಭಕ್ತಿಭೂಷನ್ ಗುರೂಜಿ ಇವರು ದೀಪ ಬೆಳಗಿಸಿ,ಸ್ಥಳೀಯ ನಿವಾಸಿಗಳಾದ ಲಿಂಗಪ್ಪ ಜಿ.ಎಸ್ ಹಾಗೂ ಮೋಹಿನಿ ಇವರ ಬಡ ಕುಟುಂಬಕ್ಕೆ ಭಾರತ ಮಾತೆಯ ಭಾವಚಿತ್ರವನ್ನು ನೀಡಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪೊಳಲಿ ತಪೋವದ ಪೂಜ್ಯ
ಸ್ವಾಮೀಜಿಯವರು ಮನೆ ದುರಸ್ತಿಗೆ ಸಹಕರಿಸಿದ ದಾನಿಗಳಿಗೆ ಶಾಲು ಹಾಕಿ ಪ್ರಸಾದವನ್ನು ನೀಡಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷರಾದ ಸಂತೋಷ್ ಕುಮಾರ್,ಕಾರ್ಯದರ್ಶಿ ಶ್ರೀಧರ್ ಹೆಚ್, ಸುರೇಶ ಕುಲಾಲ್, ವಿಶ್ವನಾಥ ಕುಲಾಲ್, ರವೀಂದ್ರ ಎನ್, ದಿನೇಶ್ ಬೆರ್ವ, ಉಮೇಶ್ ಎನ್,ಚಂದ್ರ ಶೇಖರ್ ಮತ್ತಿತರರು ಉಪಸ್ಥಿತರಿದ್ದರು, ಕಳ್ಳಿಗೆ ಗ್ರಾ ಪಂ ಉಪಾಧ್ಯಕ್ಷರಾದ ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.















