ಬಂಟ್ವಾಳ, ಡಿ.24: ತಾಲೂಕಿನ ಸಜೀಪನಡು ಗ್ರಾಮದ ಚಟ್ಟೆಕಲ್ ಜಲಾಲಿಯಾ ಮಸೀದಿಯ ನವೀಕರಣ ಕಾರ್ಯಕ್ಕೆ 'ಒ ಖಾಲಿದ್ ಚಾರಿಟೇಬಲ್ ಟ್ರಸ್ಟ್' ವತಿಯಿಂದ ಒಂದು ಲಕ್ಷ ರೂಪಾಯಿಗಳ ಚೆಕ್ ವಿತರಣೆ ಮಾಡಲಾಯಿತು.
ಸಯ್ಯದ್ ಮುಸ್ತಾಕ್ ತಂಙಳ್ ದುವಾ ಮೂಲಕ ಚಾಲನೆ ನೀಡಿದರು. ಪಿ.ಎಸ್.ಮುಹಮ್ಮದ್ ಕಾಮಿಲ್ ಸಖಾಫಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಅಲ್ತಾಫ್ ಕುಂಪಲ,
ರಫೀಕ್ ಹಾಜಿ ಕಿಸ್ವಾ, ಸಿದ್ದೀಕ್ ಕೊಳಕೆ, ಹಂಝ ಮಂಚಿ, ಸದ್ದಾಂ ಗೋಲಿಪಡ್ಪು ಉಪಸ್ಥಿತರಿದ್ದರು.
ಅಕ್ಬರ್ ಅಲಿ ಮದನಿ ಸ್ವಾಗತಿಸಿದರು. ಇರ್ಷಾದ್ ಹಾಜಿ ಗೂಡಿನಬಳಿ ವಂದಿಸಿದರು.














