ಬಂಟ್ವಾಳ: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದ ವ್ಯಕ್ತಿಯಿಂದ ಪುದು ಗ್ರಾ ಪಂ ಅಭಿವೃದ್ದಿ ಅಧಿಕಾರಿ ಸ್ಮೃತಿ ರವರು ರೂ 3000 ದಂಡ ವಸೂಲಿ ಮಾಡಿ ಎಚ್ಚರಿಕೆ ನೀಡಿ ಕಳುಹಿಸಿದ ಘಟನೆ ನಡೆದಿದೆ.
ನ.23ರಂದು ತಡರಾತ್ರಿ ಹೋಟೆಲ್ ಉದ್ಯಮ ನಡೆಸುತ್ತಿರುವ ವ್ಯಕ್ತಿ ಪುದು ಗ್ರಾಮದ ಅಮೆಮಾರ್ ಎಂಬ ಪ್ರದೇಶದಲ್ಲಿ ತ್ಯಾಜ್ಯವನ್ನು ತಂದು ಸುರಿಯುವ ಸಂದರ್ಭ ಸ್ಥಳೀಯರು ಮುತ್ತಿಗೆ ಹಾಕಿ ತಡೆದು ಮಾಹಿತಿಯನ್ನು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ರವರಿಗೆ ತಿಳಿಸಿದ್ದಾರೆ. ಅದ್ಯಕ್ಷರು ಪೋಲಿಸ್ ಸಹಕಾರದೊಂದಿಗೆ ಮಾಹಿತಿ ಕಲೆ ಹಾಕಿ ಅದರಂತೆ ಆ ವ್ಯಕ್ತಿಯಿಂದ ಪಂಚಾಯತ್
ಅಭಿವೃದ್ದಿ ಅಧಿಕಾರಿ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಪುದು ಗ್ರಾಮದ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಗ್ರಾಮ ಪಂಚಾಯತ್, ಪ್ರಥಮ ಸಭೆಯಲ್ಲಿ ಕಸ ಸುರಿದವರ ಬಗ್ಗೆ ಮಾಹಿತಿ ಕೊಟ್ಟವರಿಗೆ ರೂ 1000 ಬಹುಮಾನ ನೀಡುವುದಾಗಿ ನಿರ್ಣಾಯಿಸಲಾಗಿತ್ತು.ಅದರಂತೆ ಮಾಹಿತಿದಾರರಿಗೆ ಮೊತ್ತವನ್ನು ನೀಡುವುದಾಗಿ ರಮ್ಲಾನ್ ಮಾರಿಪಳ್ಳ ತಿಳಿಸಿದ್ದಾರೆ.















