ಬಂಟ್ವಾಳ : ಡಾ| ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಯೋಜನೆಯ ಕಾರ್ಯಕರ್ತರು, ತಾಲೂಕು ಜನಜಾಗೃತಿ ಸದಸ್ಯರು ಒಕ್ಕೂಟದ ಸದಸ್ಯರು ಸೇರಿಕೊಂಡು ತಾಲೂಕಿನ ಗುಡ್ಡೆಯಂಗಡಿ ಯಲ್ಲಿರುವ “ನಮ್ಮ ಹಿರಿಯರ ಮನೆ" ಆಶ್ರಮದಲ್ಲಿ ವೃದ್ದರಿಗೆ ಆಹಾರ ಸಾಮಗ್ರಿಗಳು ಮತ್ತು ಹಣ್ಣು ಹಂಪಲು ವಿತರಿಸುವ ಮೂಲಕ ಅರ್ಥಪೂರ್ವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಗವರ್ನರ್ ಪ್ರಕಾಶ್ ಕಾರಂತ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರು ರೊನಾಲ್ಡ್ ಡಿ ಸೋಜಾ, ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ, ಶೌರ್ಯ ಘಟಕದ ಪ್ರತಿನಿಧಿ ಪ್ರವೀಣ್ ಕಾಡಬೆಟ್ಟು, ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಹಾಗೂ ಸದಾನಂದ ನಾವೂರ
ತಾಲೂಕು ಯೋಜನಾಧಿಕಾರಿ ಜಯಾನಂದ ಪಿ. ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರು ಶ್ರೀನಿವಾಸ ಪೂಜಾರಿ, ತಾರನಾಥ ಕೊಟ್ಟಾರಿ, ಶೇಖರ ಸಾಮಾನಿ, ಸದಾನಂದ ಸೀತಾಳ, ಶಶಿಧರ ಆಚಾರ್ಯ, ದೇವಪ್ಪ ಕುಲಾಲ್, ಜನಾರ್ಧನ ಅಚಾರ್ಯ ಆಶ್ರಮದ ಮ್ಯಾನೇಜರ್ ರಾಮಣ್ಣ ಗೌಡ .ತಾಲೂಕಿನ ಮೇಲ್ವಿಚಾರಕರು ಒಕ್ಕೂಟದ ಅಧ್ಯಕ್ಷರುಗಳು ಹಾಗೂ ಆಶ್ರಮದ ವೃದ್ಧರು ಉಪಸ್ಥಿತರಿದ್ದರು.















