ಬಂಟ್ವಾಳ: ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಇದರ ನೂತನ ಬಜ್ಪೆ ಶಾಖೆಯ ಉದ್ಘಾಟನಾ ಸಮಾರಂಭ ಅ. 2ರಂದು ಶುಕ್ರವಾರ ಬೆಳಗ್ಗೆ 10ಕ್ಕೆ ನಡೆಯಲಿದೆ.
ಬಜ್ಪೆ ಮುಖ್ಯ ರಸ್ತೆಯ ನ್ಯೂಲೈಟ್ ಕಾಂಪ್ಲೆಕ್ಸ್‌ನ ಒಂದನೇ ಮಹಡಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶಾಸಕರಾದ ಉಮಾನಾಥ ಎ.ಕೋಟ್ಯಾನ್ ಉದ್ಘಾಟಿಸಲಿದ್ದಾರೆ. ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಜೀವನ್ ಲಾಯ್ಡ್ ಪಿಂಟೊ ಅಧ್ಯಕ್ಷತೆ ವಹಿಸಲಿದ್ದಾರೆ. ಬಜ್ಪೆ ಸೈಂಟ್ ಜೋಸೆಫ್ ಚರ್ಚ್‌ನ ಧರ್ಮಗುರು ಫಾ। ಆಂಡ್ರ್ಯೂ ಡಿಸೋಜ ಆಶೀರ್ವಚನ ನೀಡಲಿದ್ದಾರೆ. ಬಜ್ಪೆ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಲೋಕೇಶ್ ಪೂಜಾರಿ ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶದ ಅಧ್ಯಕ್ಷರಾದ ಸಂತೋಷ್ ಡಿಸೋಜ ಗಣಕಯಂತ್ರ ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಎಚ್.ಎನ್, ಬಜ್ಪೆ ನಾಗರಿಕರ ಹಿತರಕ್ಷಣಾ
ವೇದಿಕೆಯ ಅಧ್ಯಕ್ಷ ಸಿರಾಜ್ ಬಜ್ಪೆ, ಕಟ್ಟಡ ಮಾಲೀಕರಾದ ಚಾರ್ಲ್ಸ್ ಡಿಕುನ್ಹ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾದ ವಲೇರಿಯನ್ ಬರೆಟ್ಟೊ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲಿನ್ ಗ್ರೇಸಿ ಡಿಸೋಜ, ಶಾಖಾ ವ್ಯವಸ್ಥಾಪಕರಾದ ಜೇಸನ್ ರುಬನ್ ಫರ್ನಾಂಡಿಸ್, ಆಡಳಿತ ಮಂಡಳಿ ಸದಸ್ಯರಾದ ಅನಿಲ್ ಹೆರಾಲ್ಡ್ ಫ್ರಾಂಕ್, ಲಾದ್ರು ಮಿನೇಜಸ್, ರೊನಾಲ್ಡ್ ವಿಜಯ್ ಫೆರ್ನಾಂಡಿಸ್, ಗ್ಲೋರಿಯಾ ಪ್ರೀಮಾ ಕುಟಿನ್ಹೊ, ವಿನ್ಸೆಂಟ್ ಕ್ಲೋಡಿ ಕಾರ್ಲೊ, ಲಾರೆನ್ಸ್ ಕಿಫರ್ಡ್ ಡಿಸೋಜ, ಫ್ರಾನ್ಸಿಸ್ ಮೆಂಡೋನ್ಸಾ, ಹಿಲಾರಿ ಕ್ರಾಸ್ತಾ, ಹ್ಯೂಬರ್ಟ್ ಲೋಬೊ, ಅನಿತಾ ನೊರೋನ್ಹ, ಬೆನೆಡಿಕ್ಟಾ ಸಲ್ಡಾನ್ಹಾ, ವಿಶಾಲ್ ಡಿಸೋಜ, ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಳ್ಳಲಿದ್ದಾರೆ.











