ನೆತ್ತರಕೆರೆ :ಜು 30, ನವೋದಯ ಮಿತ್ರ ಕಲಾ ವೃಂದದ ಆಶ್ರಯದಲ್ಲಿ ರಕ್ತದಾನ ಶಿಬಿರ.

Coastal Bulletin
ನೆತ್ತರಕೆರೆ :ಜು 30, ನವೋದಯ ಮಿತ್ರ ಕಲಾ ವೃಂದದ ಆಶ್ರಯದಲ್ಲಿ ರಕ್ತದಾನ ಶಿಬಿರ.

ಬಂಟ್ವಾಳ :ಪ್ರತಿಷ್ಠಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ,ನವೋದಯ ಮಿತ್ರ ಕಲಾ ವೃಂದ (ರಿ) ಹಾಗೂ ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ ಆಶ್ರಯದಲ್ಲಿ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಜು 30 ಆದಿತ್ಯವಾರ ಬೆಳಿಗ್ಗೆ 9 ರಿಂದ 12 ಗಂಟೆಯ ತನಕ ಸಂಘದ ಸಭಾಂಗಣದಲ್ಲಿ ನಡೆಯಲಿದೆ.

ಈ ಶಿಬಿರವನ್ನು ಯೆನೋಪೋಯ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆ ದೇರಳಕಟ್ಟೆ ಇಲ್ಲಿನ ಸಹ ಪ್ರಧ್ಯಾಪಕರಾದ ಬಾಲಕೃಷ್ಣ ಕುಮಾರ ಉದ್ಘಾಟಿಸಲಿದ್ದು, ಉದ್ಯಮಿ

ಪ್ರೇಮ್ ಜೀತ್ ಶೆಟ್ಟಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿ ಗಳು ಈ ಸೇವಾ ಕಾರ್ಯದಲ್ಲಿ ಭಾಗವಹಿಸಬೇಕೆಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment