ಮಂಗಳೂರಿನ ಹಂಪನಕಟ್ಟೆಯ ಲೈಟ್ ಹೌಸ್ ಹಿಲ್ ರಸ್ತೆಯ ಮ್ಯಾಕ್ಸಿಮಸ್ ಕಮರ್ಪಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಿಲಯನ್ಸ್ ನಿಪ್ಪೋನ್ ಲೈಫ್ ಇನ್ಶೂರೆನ್ಸ್ ಕಚೇರಿಯಲ್ಲಿ ಇಂದು ಬೆಳಿಗ್ಗೆ ಬೆಂಕಿ ದುರಂತ ಸಂಭವಿಸಿದೆ.
ಕಚೇರಿಯು ಕಟ್ಟಡದ ಮೂರನೇ ಅಂತಸ್ತಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ.
ಈ
ಬೆಂಕಿ ಅವಘಡದಲ್ಲಿ ಕಂಪ್ಯೂಟರ್, ಎಸಿ ಮತ್ತಿತರ ಪರಿಕರಗಳು ಸುಟ್ಟು ಹೋಗಿರುವುದು ಮಾತ್ರವಲ್ಲ ಲಕ್ಷಾಂತರ ರೂ ನಷ್ಟವಾಗಿದೆ ಎಂದು ತಿಳಿದುಬಂದಿದೆ.
















