ಬಂಟ್ವಾಳ :ಕುಲಾಲ ಕುಂಭಾರ ಯುವವೇದಿಕೆ ಬಂಟ್ವಾಳ ಇದರ ವತಿಯಿಂದ ಶ್ರಿ ಗುರು ಚೈತನ್ಯ ಸೇವಾಶ್ರಮ ಗುಂಡೂರಿಯಲ್ಲಿ ಇತ್ತೀಚಿಗೆ ಶ್ರಮದಾನ ನಡೆಸಲಾಯಿತು.
ಸುಮಾರು 4 ಫೀಟ್ ಮಣ್ಣು ಬಿದ್ದು ತುಂಬಿದ್ದ ಗುಂಡಿಯನ್ನು 8.5ಆಳ ಮಾಡಿ ,ರಿಂಗ್ ಅಳವಡಿಸಿ,ಜಲ್ಲಿ ಹಾಗೂ ಮಣ್ಣಿನ ಪದರವನ್ನು ರಿಂಗ್ ನ ಹೊರಭಾಗಕ್ಕೆ ತುಂಬಿ ಆಶ್ರಮ ವಾಸಿಗಳ ಮೂಲಸೌಕರ್ಯದ ಪ್ರಥಮ ಹಂತದ ಕಾರ್ಯವಾದ ಇಂಗು ಗುಂಡಿಯನ್ನು ನಿರ್ಮಿಸಲಾಯಿತು.
ಕರಸೇವೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ, ಕಾರ್ಯದರ್ಶಿ ನಿತೀಶ್ ಪಲ್ಲಿಕಂಡ,ಪುನೀತ್ ಕಾಮಾಜೆ
ಕಾರ್ತಿಕ್ ಮಯ್ಯರಬೈಲು,ಸಚಿನ್ ನೆರಂಬೊಳು,ರಾಮ ಪಿಟ್ಟಾರ್,ಹಾಗೂ ವೇದಿಕೆಯ ಗೌರವ ಸಲಹೆಗಾರರಾದ ವಿಠಲ ಪಲ್ಲಿಕಂಡ,ನಾಗೇಶ್ ಬಾಳೆಹಿತ್ಲು,ಗಣೇಶ್ ಕಾಮಾಜೆ ಮತ್ತಿತರರು ಬಾಗವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆ ವತಿಯಿಂದ ಆಶ್ರಮ ವಾಸಿಗಳಿಗೆ ಲಘು ಉಪಹಾರ ಮತ್ತು ವಿಠಲ ಪಲ್ಲಿಕಂಡರವರ ವತಿಯಿಂದ 50 ಕೆಜಿ ಅಕ್ಕಿಯನ್ನು ಒದಗಿಸಲಾಯಿತು. ಗುರು ಚೈತನ್ಯ ಸೇವಾಶ್ರಮ ದ ಹೊನ್ನಯ್ಯ ಕಾಟಿಪಳ್ಳ ಉಪಸ್ಥಿತರಿದ್ದರು














