ಬಂಟ್ವಾಳ: ಜಿಲ್ಲೆಯ ಖ್ಯಾತ ಕಲಾ ಸಾಧಕ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕಲಾವಿದ ಮನೋಜ್ ಕನಪಾಡಿಯವರ ಕೈ ಚಳಕದಲ್ಲಿ ಕುಕ್ಕೆಶ್ರೀ ಕಲಾ ಕುಟೀರದಲ್ಲಿ ಸುಮಾರು 11 ಅಡಿ ಎತ್ತರದ ಶ್ರೀ ಭೂವರಹ ಸ್ವಾಮಿಯ ಬೃಹತ್ ಫೈಬರ್ ಕಲಾಕೃತಿಯೊಂದು ಮಹರ್ಷಿ ಆನಂದ ಗುರೂಜಿಯವರ ಕೋರಿಕೆ ಮೇರೆಗೆ ನಿರ್ಮಾಣಗೊಂಡು ಬೆಂಗಳೂರಿಗೆ ರವಾನೆಯಾಗಿದೆ.
ಸತತವಾಗಿ 15ದಿವಸಗಳ ಕಾಲ ಹಗಲಿರುಳು ಭೂವರಹ ಸ್ವಾಮಿಯ ಫೈಬರ್ ಕಲಾಕೃತಿ ನಿರ್ಮಾಣದಲ್ಲಿ ತನ್ನನ್ನು ಶ್ರದ್ದಾಭಕ್ತಿಯಿಂದ ತೊಡಗಿಸಿಕೊಡಿರುವ ಮನೋಜ್
ರವರು ಸತತವಾಗಿ 20ವರ್ಷಗಳಿಂದ ವಿವಿಧ ಕಲಾಕೃತಿ ರಚನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ, ಇವರ ಸಾಧನೆಯನ್ನು ಗುರುತಿಸಿ ಇತ್ತೀಚೆಗೆ ದ. ಕ ಜಿಲ್ಲಾಡಳಿತವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.















