Coastal Bulletin

ಬಂಟ್ವಾಳ:ಸಾಮಾನ್ಯ ವ್ಯಕ್ತಿಯೊಬ್ಬ ದೇವರ ಮೇಲಿನ ಭಕ್ತಿ ಮತ್ತು ನಂಬಿಕೆಯೊಂದಿಗೆ ಮುನ್ನಡೆದು ಸಾಧನೆಯ ಮೆಟ್ಟಿಲು ಏರಿದಾಗ ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. ಇಲ್ಲಿನ ನ ಸರಪಾಡಿ ಸಮೀಪದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲ ಅಶ್ವನಿ ಕುಮಾರ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಶಾಂಕ್ ನೆಲ್ಲಿತ್ತಾಯ ಪುತ್ತೂರು ಧಾರ್ಮಿಕ ಉಪನ್ಯಾಸ ನೀಡಿದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮೋಹನ ಗೌಡ ಇಡ್ಯಡ್ಕ, ಪ್ರಮುಖರಾದ ಮಾಗಣೆ ರತ್ನಾಕರ ಕೊಂಡೆ, ರಾಮ ಭಟ್ ಪೊಳಲಿ, ಡಾ..ಸತ್ಯಶಂಕರ ಶೆಟ್ಟಿ, ಅರವಿಂದ ಶೆಟ್ಟಿ, ಬಿ.ಪದ್ಮಶೇಖರ ಜೈನ್, ತಾರನಾಥ ಕೊಟ್ಟಾರಿ, ಉಳಿ

ದಾಮೋದರ ನಾಯಕ್, ಕದ್ರಿ ನವನೀತ ಶೆಟ್ಟಿ, ಕೆ.ಮಾಯಿಲಪ್ಪ ಸಾಲ್ಯಾನ್, ಸಂಪತ್ ಕುಮಾರ್ ಶೆಟ್ಟಿ, ಪ್ರವೀಣ ಕುಮಾರ್, ಸದಾನಂದ ಶಾಸ್ತ್ರಿ, ಪ್ರದೀಪ ಆಳ್ವ, ಸುಭಾಶ್ಚಂದ್ರ ಜೈನ್, ರಾಮಣ್ಣ ಶೆಟ್ಟಿ, ಉದಯ ಶೆಟ್ಟಿ, ಮಿಥುನ್ ರೈ ಇದ್ದರು.

ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಬಿ.ಸಿ.ರೋಡು ಸ್ವಾಗತಿಸಿ, ಶಿವರಾಮ ಶೆಟ್ಟಿ ವಂದಿಸಿದರು. ಸಂತೋಷ್ ಸಿದ್ಧಕಟ್ಟೆ ನಿರೂಪಿಸಿದರು.


Leave a Comment