ಬಂಟ್ವಾಳ:ತಾಲ್ಲೂಕಿನ ವಿವಿಧೆಡೆ ಗುರುವಾರ ಸಂಜೆ ಭಾರೀ ಗುಡುಡು ಮತ್ತು ಮಿಂಚು ಸಹಿತ ಕೆಲಹೊತ್ತು ಸುರಿದ ಗಾಳಿ ಮಳೆಗೆ ಕೆಲವೆಡೆ ಮನೆಗೆ ಹಾನಿಯಾಗಿದೆ. ಇಲ್ಲಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟ ಸ್ರ್ ನಿವಾಸಿ ಹರೀಶ ಶೆಟ್ಟಿ ಎಂಬವರ ಮನೆ ಮೇಲೆ ತೆಂಗಿನ ಮರ ಬಿದ್ದು ಗೋಡೆಗೆ ಹಾನಿಯಾಗಿದೆ.
ಪುರಸಭಾ ವ್ಯಾಪ್ತಿಯ ಭಂಡಾರಿಬೆಟ್ಟು ನಿವಾಸಿ ಬಿ.ಅಚ್ಚುತ ಎಂಬವರ ಹೆಂಚಿನ ಮನೆ ಮಾಡು ಒಂದು ಭಾಗ ಕುಸಿದು ಬಿದ್ದು ಗೋಡೆ ಮತ್ತು ಹೆಂಚು ಹಾನಿಗೀಡಾಗಿದೆ. ಇಲ್ಲಿನ ಲೊರೆಟ್ಟೋ -ಅಗ್ರಾರ್, ಜಕ್ರಿಬೆಟ್ಟು ರಸ್ತೆ ಬದಿ ಚರಂಡಿ ಇಲ್ಲದೆ ರಸ್ತೆಯಲ್ಲೇ
ಕೆಸರು ತುಂಬಿದ ಮಳೆ ನೀರು ಹರಿದಿದೆ. ಬಹುತೇಕ ಗ್ರಾಮೀಣದ ರಸ್ತೆಗಳಲ್ಲಿ ಕೂಡಾ ಇದೇ ಸ್ಥಿತಿ ಕಂಡು ಬಂದಿದೆ. ಬಿ.ಸಿ.ರೋಡು ಸಹಿತ ಹಲವೆಡೆ ವಿದ್ಯುತ್ ಕಣ್ಣುಮುಚ್ಚಾಲೆ ಮತ್ತು ಕುಡಿಯುವ ನೀರಿನ ಪೂರೈಕೆಗೆ ಅಡ್ಡಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.














