ಕುಂಪಣಮಜಲು: 26ನೇ ವರ್ಷದ ಶ್ರೀಶನೈಶ್ಚರ ಪೂಜೆ ಹಾಗೂ ಭಜನಾ ಸಂಕೀರ್ತನೆ.

Coastal Bulletin
ಕುಂಪಣಮಜಲು: 26ನೇ ವರ್ಷದ ಶ್ರೀಶನೈಶ್ಚರ ಪೂಜೆ ಹಾಗೂ ಭಜನಾ ಸಂಕೀರ್ತನೆ.

ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಕುಂಪಣಮಜಲು ಶ್ರೀ ಶನೇಶ್ಚರಾಂಜನೇಯ ಮಂದಿರದಲ್ಲಿ 26ನೇ ವರ್ಷದ ಶ್ರೀಶನೈಶ್ಚರ ಪೂಜೆ ಹಾಗೂ ಭಜನಾ ಸಂಕೀರ್ತನೆ ಕಾರ್ಯಕ್ರಮವು ಡಿ.27 ಹಾಗೂ 28ರಂದು ನಡೆಯಲಿದೆ.

27ರಂದು ಶನಿವಾರ ಬೆಳಿಗ್ಗೆ 6 ರಿಂದ ದುರ್ಗಾನಮಸ್ಕಾರ ಪೂಜೆ ಗಣಹೋಮ, ತಂಬಿಲ ಸೇವೆ, 9:30ಕ್ಕೆ ಶ್ರೀ ಶನೈಶ್ಚರ ಪೂಜೆ ಬಳಿಕ ವಿಜ್ಞಾಪನಾ ಪತ್ರ ಬಿಡುಗಡೆ, ಮಹಾಪೂಜೆ ಅನ್ನ ಸಂತರ್ಪಣೆ ಹಾಗೂ ಅಪರಾಹ್ನ 3ರಿಂದ

ಸಂಜೆ 7ರ ವರೆಗೆ ಭಜನಾ ಸಂಕೀರ್ತನೆ ನಡೆಯಲಿದೆ.

ಡಿ.28ರಂದು ಆದಿತ್ಯವಾರ ಬೆಳಿಗ್ಗೆ 7:00 ರಿಂದ ಸಂಜೆ 6:30ರ ವರೆಗೆ ವಿವಿದ ಭಜನಾ ತಂಡಗಳಿಂದ ಗಳಿಂದ ನಿರಂತರ ಭಜನಾ ಸಂಕೀರ್ತನೆ ನಡೆಯಲಿದೆ ಎಂದು ಮಂದಿರದ ಪ್ರಕಟಣೆ ತಿಳಿಸಿದೆ.

Leave a Comment