ಮಂಗಳಾದೇವಿ: ಕುಲಾಲ ಭವನದ ಲೋಕಾರ್ಪಣಾ ಸಮಾರಂಭವ. ಕುಲಾಲ ಸಮುದಾಯ ಸಮಾಜದ ಎಲ್ಲಾ ವರ್ಗದವರಿಗೂ ಪ್ರೀತಿ ಪಾತ್ರರು:ಒಡಿಯೂರು ಶ್ರೀ.

Coastal Bulletin
ಮಂಗಳಾದೇವಿ: ಕುಲಾಲ ಭವನದ ಲೋಕಾರ್ಪಣಾ ಸಮಾರಂಭವ. ಕುಲಾಲ ಸಮುದಾಯ ಸಮಾಜದ ಎಲ್ಲಾ ವರ್ಗದವರಿಗೂ ಪ್ರೀತಿ ಪಾತ್ರರು:ಒಡಿಯೂರು ಶ್ರೀ.

ಮಂಗಳೂರು: ಕುಲಾಲ ಸಂಘ ಮುಂಬಯಿ ನಿರ್ಮಣದ ಸುಮಾರು15ಕೋಟಿ ರೂ ವೆಚ್ಚದ ಅತ್ಯಾದುನಿಕ ಸೌಲಭ್ಯ ಹೊಂದಿರುವ ಹವಾ ನಿಯಂತ್ರಿತ ಭವ್ಯ ಕುಲಾಲ ಭವನದ ಉದ್ಘಾಟನಾ ಸಮಾರಂಭವು ನ 23ರಂದು ಆದಿತ್ಯವಾರ ಮಂಗಳಾದೇವಿ ದೇವಸ್ಥಾನದ ಬಳಿ ನಡೆಯಿತು.

ಕುಲಾಲ ಭವನವನ್ನು ಲೋಕಾರ್ಪಣೆ ಮಾಡಿ ಆಶೀರ್ವಾಚನವಿತ್ತ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಸರಳತೆ, ಸಜ್ಜನಿಕೆಯ, ತಾಳ್ಮೆ ಮೂಲ್ಯರು ಮೈಗೂಡಿಸಿಕೊಂಡ ವ್ಯಕ್ತಿತ್ವ, ಮೂಲ್ಯರು ಅಮೂಲ್ಯ ಸಂಪತ್ತು. ತ್ಯಾಗ, ವಿಶ್ವಾಸದ ಮೂಲಕ ಇಡೀ ಸಮಾಜಕ್ಕೆ ಪ್ರೀತಿ ಪಾತ್ರರದವರು, ಕುಲಾಲ ಸಮುದಾಯ ಭವನವು ಸಮಾಜದ ಎಲ್ಲಾ ವರ್ಗದ ಜನರಿಗೆ ಉಪಯೋಗವಾಗಲಿ ಎಂದು ಹೇಳಿದರು 

ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಕುಲಾಲ ಸಮಾಜದ ಸಜ್ಜನಿಕೆಯ ರೂಪವಾಗಿ ಮುಂಬಯಿ ಸಂಘದ ನೆರವಿನಿಂದ ಕುಲಾಲ ಭವನ ನಿರ್ಮಾಣವಾಗಿದ್ದು, ಇದು ಕುಲಾಲ ಸಮುದಾಯ ಚರಿತ್ರೆಯಲ್ಲಿ ಐತಿಹಾಸಿಕ ದಿನ ಎಂದರು.

ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಕುಲಾಲ ಭವನವು ಕರಾವಳಿ ಕರ್ನಾಟಕದ ಕಿರೀಟಕ್ಕೆ ಗರಿ ಮೂಡಿಸಿದಂತಾಗಿದೆ. ಕುಲಾಲರು ತಮ್ಮ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಬೇಕು. ಸೌಹಾರ್ದ ಸಮಾಜ ಕೊಡುಗೆ ಸಲ್ಲಿಸಬೇಕು ಎಂದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸು ನನಸಾಗಲು ಕುಂಬಾರಿಕೆಯ ಕೌಶಲ್ಯವನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಲು ಕುಂಬಾರಿಕೆ ಕೇಂದ್ರಗಳನ್ನು ಆರಂಭಿಸಲು ನಾವೆಲ್ಲ ಕೈಜೋಡಿಸಬೇಕು ಎಂದರು.

ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ದಾನಿಗಳು ತಮ್ಮ ಹೆತ್ತವರ ಹೆಸರಿನಲ್ಲಿ ದೊಡ್ಡ ಮೊತ್ತಗಳನ್ನು ನೀಡುವ ಮೂಲಕ ನಿರ್ಮಾಣಗೊಂಡ ಕುಲಾಲ ಭವನವು ಮಂಗಳೂರಿಗೆ ದೊಡ್ಡ ಹೆಗ್ಗುರುತು. ಇದರ ದಾನಿಗಳೆಲ್ಲ ಅಭಿನಂದನಾರ್ಹರು ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಯಾವುದೇ ಸಮುದಾಯದ ಸಂಖ್ಯೆ ಮುಖ್ಯವಲ್ಲ, ಅದರ ಉದ್ದೇಶ ಮುಖ್ಯ ಎಂಬುದನ್ನು ಕುಲಾಲ ಸಮುದಾಯ ತೋರಿಸಿ ಕೊಟ್ಟಿದೆ ಎಂದರು.

ಸನ್ಮಾನ

ಕುಲಾಲ ಭವನ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ ಸುನಿಲ್ ರಾಜು ಸಾಲಿಯಾನ್, ಗಿರೀಶ್ ಬಿ. ಸಾಲಿಯಾನ್, ಜಗದೀಶ್ ಆರ್. ಬಂಜನ್, ಎಸ್.ಆರ್.ಬಂಜನ್, ವಿಶ್ವನಾಥ ಬಂಗೇರ ಮತ್ತು ಸಾವಿತ್ರಿ ಪಿ. ಕೆ.ಸಾಲಿಯಾನ್ ಅವರನ್ನು ಕುಟುಂಬದ ಸಹಿತ ಹಾಗೂ ಇತರ ದಾನಿಗಳನ್ನು, ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

ಆಕರ್ಷಕ ಮೆರವಣಿಗೆ

ಕುಲಾಲ ಭವನ ಉದ್ಘಾಟನೆ ಪೂರ್ವ ದಲ್ಲಿ ಮಂಗಳಾದೇವಿ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ, ವೈಭವದ ಮೆರ ವಣಿಗೆ ಪ್ರಾರಂಭವಾಯಿತು. ಮುಂಬಯಿ

ಕುಲಾಲ ಸಂಘದ ಮಹಿಳಾ ವಿಭಾಗ, ವೀರನಾರಾಯಣ ಮಾತೃ ಮಂಡಳಿ ಹಾಗೂ ಸ್ವಾಮಿಲ ಪದವು ಶ್ರೀ ಮಲ್ಲಿಕಾರ್ಜುನ ಸ್ವಾಮಿ ತಂಡದಿಂದ ಕುಣಿತ ಭಜನೆ, ಚೆಂಡೆ -ವಾದ್ಯ ಮೇಳ, ಗೊಂಬೆ-ಕೀಲು ಕುದುರೆ, ಶಿಸ್ತಿನಿಂದ ಸಾಗಿದ ಎನ್‌ಸಿ ಕೆಡೆಟ್ ಮಕ್ಕಳು ಸೇರಿದಂತೆ ಸಹಸ್ರಾರು ಭಾಗವಹಿಸಿದ್ದರು. 

ಮುಂಬಯಿ ಕುಲಾಲ ಸಂಘದ ಗೌರವ ಅಧ್ಯಕ್ಷ ಪಿ.ದೇವದಾಸ್ ಎಲ್.ಕುಲಾಲ್ ದಿಕ್ಕೂಚಿ ಭಾಷಣ ಮಾಡಿದರು. ಅಧ್ಯಕ್ಷ ರಘು ಎ.ಮೂಲ್ಯ ಅಧ್ಯಕ್ಷತೆ ವಹಿಸಿ ಸಂದೇಶ ನೀಡಿದರು.

ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ ಯೆಸ್ಕೋ ನಾಯಕ್, ನಡುಬೆಟ್ಟು ಶ್ರೀ ಉದ್ಭವ ರೌದ್ರನಾ ಥೇಶ್ವರ ದೇವಸ್ಥಾನದ ಧರ್ಮದರ್ಶಿ ಡಾ.ರವಿ ಎನ್. ಮಂಗಳಾ ದೇವಿ ದೇವಸ್ಥಾನದ ಟ್ರಸ್ಟಿ ಅರುಣ್ ಕುಮಾರ್ ಐತಾಳ್, ಮೋರ್ಗನ್ಸ್ ಗೇಟ್ ಸೈಂಟ್ ರೀಟಾ ಚರ್ಚ್ ಧರ್ಮಗುರು ಫಾದರ್ ಎರಿಕ್ ಕ್ರಾಸ್ತ, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ.ರೈ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯ ಕಾಂತ ಜಯ ಸುವರ್ಣ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸ್ಥಾಪಕ ಜಯಕೃಷ್ಣ ಎ.ಶೆಟ್ಟಿ ಮತ್ತಿತರರು ಶುಭ ಹಾರೈಸಿದರು.

ದ ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಉದ್ಯಮಿಗಳಾದ ಸಂಜೀವ ಕೆ.ಬಂಗೇರ, ರಮಾನಂದ ಬಂಗೇರ, ಕೆಪಿಸಿಸಿ ಸದಸ್ಯ ಪೃಥ್ವಿರಾಜ್ ಎಡಪದವು, ದಕ ಜಿಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ದಿವಾಕರ ಮೂಲ್ಯ, ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮನ್ನಿಪಾಡಿ, ಬರ್ಕೆ ಫ್ರೆಂಡ್ಸ್ ಅಧ್ಯಕ್ಷ ಯಕ್ಷೇಶ್ ಬರ್ಕೆ, ಸಂಘದ ಪದಾಧಿಕಾರಿ ಗಳು ಉಪಸ್ಥಿತರಿದ್ದರು.

ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ಕರುಣಾಕರ ಬಿ.ಸಾಲಿಯಾನ್ ಸ್ವಾಗತಿಸಿ. ಉಪಾಧ್ಯಕ್ಷ ಡಿ.ಐ.ಮೂಲ್ಯ ವಂದಿಸಿದರು.ಪ್ರವೀಣ್ ಬಸ್ತಿ ಮತ್ತು ನವೀನ್ ಕುಲಾಲ್,ಅರುಣಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

Leave a Comment