ಬಂಟ್ವಾಳ: ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ವಾರ್ಷಿಕ ಮಹಾಸಭೆ. ಸಹಕಾರಿ ಸಂಘಗಳ ಒಗ್ಗಟ್ಟಿನಿಂದ ಅಭಿವೃದ್ಧಿ ಸಾಧ್ಯ :ಕೆ. ಸಂಜೀವ ಪೂಜಾರಿ

Coastal Bulletin
ಬಂಟ್ವಾಳ: ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ವಾರ್ಷಿಕ ಮಹಾಸಭೆ. ಸಹಕಾರಿ ಸಂಘಗಳ ಒಗ್ಗಟ್ಟಿನಿಂದ ಅಭಿವೃದ್ಧಿ ಸಾಧ್ಯ :ಕೆ. ಸಂಜೀವ ಪೂಜಾರಿ

ಬಂಟ್ವಾಳ: ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ನಿಯಮಿತ ಇದರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು.


ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿಯವರು ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸ  ಮಾತನಾಡಿ, ಮಹಾಮಂಡಲದಲ್ಲಿ 31' ಎ' ವರ್ಗದ ಪ್ರಾಥಮಿಕ ಮೂರ್ತೆದಾರರ ಸೇವಾ ಸಹಕಾರಿ ಸಂಘಗಳಿದ್ದು' ಬಿ' ವರ್ಗದ 1826 ಸಹಸದಸ್ಯರಿದ್ದು, ವರದಿ ವರ್ಷದಲ್ಲಿ 45 ಕೋಟಿ ವ್ಯವಹಾರ ನಡೆಸಿ 11.44 ಲಕ್ಷ ಲಾಭ ಗಳಿಸಿ 97% ವಸೂಲಾತಿಯಾಗಿದ್ದು ಲೆಕ್ಕಪರಿಶೋಧನೆಯಲ್ಲಿ 'ಎ ' ತರಗತಿ ಪಡೆದಿದೆ.ಸದಸ್ಯರಿಗೆ ಶೇ.9 ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.

ಮೂರ್ತೆದಾರರ ಮಹಾಮಂಡಲ ಹಾಗೂ ಇತರ ಮೂರ್ತೆದಾರರ ಪ್ರಾಥಮಿಕ ಸಹಕಾರಿ ಸಂಘಗಳು ಒಗ್ಗಟ್ಟಾಗಿ ಕೆಲಸ ನಿರ್ವಹಿಸಿದಾಗ ಅಭಿವೃದ್ಧಿ ಸಾಧಿಸ ಬಹುದಾಗಿದ್ದು, ಆರೋಗ್ಯಕರ ಪೈಪೋಟಿ ಇದ್ದಾಗ ಸಾಧನೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು.

ಮೂರ್ತೆದಾರರ ಸಹಕಾರಿ ಸಂಘಗಳು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಿಂತಲೂ ಹೆಚ್ಚಿನ ಶಾಖೆಗಳನ್ನು ಹೊಂದಬೇಕೆನ್ನುವ ಆಸೆ ಇದ್ದು ಭದ್ರತೆ, ಹಾಗೂ ಪ್ರಾಮಾಣಿಕತೆ ಇದ್ದಾಗ ಎಷ್ಟು ಸಾಲವನ್ನು ನೀಡಲು ಸಾಧ್ಯವಿದೆ. ಮೂರ್ತೆದಾರರ ಸಹಕಾರಿ

ಸಂಘಗಳು ಒಗ್ಗಟ್ಟು ಪ್ರದರ್ಶಿಸಿದಾಗ ಇನ್ನಷ್ಟು ಬಲ ಬರಲು ಸಾಧ್ಯವಿದೆ ಎಂದು ತಿಳಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಿಶೋರ್ ಕುಮಾರ್ 2025-26 ನೇ ಸಾಲಿನ ವರದಿ ಮಂಡಿಸಿದರು. ಲೆಕ್ಕಪತ್ರ ಹಾಗೂ ಆಯವ್ಯಯ ಮಂಡಿಸಿದರು. ಅಧ್ಯಕ್ಷರ ಅನುಮತಿಯ ಮೇರೆಗೆ ಇತರ ವಿಚಾರಗಳು ಚರ್ಚಿತಗೊಂಡವು. ಕಾರ್ಯಕ್ರಮದಲ್ಲಿ ವಿವಿಧ ಮೂರ್ತೆದಾರರ ಪ್ರಾಥಮಿಕ ಸಹಕಾರಿ ಸಂಘಗಳನ್ನು ಗೌರವಿಸಲಾಯಿತು. ಝೀ ಕನ್ನಡ ನ್ಯೂಸ್ ಸುದ್ದಿವಾಹಿನಿಯಿಂದ ಕರ್ನಾಟಕ ಐಡಲ್‌ ಪ್ರಶಸ್ತಿ ಪುರಸ್ಕೃತರಾದ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಯವರನ್ನು ಅಭಿನಂದಿಸಲಾಯಿತು.

ಉಪಾಧ್ಯಕ್ಷ ರಾಜೇಶ್ ಸುವರ್ಣ, ನಿರ್ದೇಶಕರಾದ ಶಿವಪ್ಪ ಸುವರ್ಣ, ಅಣ್ಣಿಯಾನೆ ನೋಣಯ್ಯ, ವಿಶ್ವನಾಥ ಪೂಜಾರಿ, ವಿಶ್ವನಾಥ ಬಿ., ಪುರುಷ ಎನ್. ಸಾಲ್ಯಾನ್, ಬೇಬಿ ಕುಂದ‌ರ್, ಪದ್ಮನಾಭ ಕೋಟ್ಯಾನ್, ಹರೀಶ್ ಸುವರ್ಣ, ಗಣೇಶ್‌ ಪೂಜಾರಿ, ಉಷಾ ಅಂಚನ್‌, ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕರಾದ ಉಷಾ ಅಂಚನ್ ಸ್ವಾಗತಿಸಿದರು. ಆ‌ರ್.ಸಿ. ನಾರಾಯಣ ಪರಿಚಯಿಸಿದರು. ಶೈಲಜಾ ರಾಜೇಶ್ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

Leave a Comment