ಮಂಗಳೂರು :ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಘಟನೆ ಅಖಿಲ ಭಾರತ ಮುಂಡಾಲ ಯುವ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ತ್ ಗುತ್ತಿಗೆದಾರರ ಸಂಘ ಮಂಗಳೂರು ಉಪಸಮಿತಿ ಇವರ ಸಂಪೂರ್ಣ ಸಹಕಾರದೊಂದಿಗೆ ಅತ್ತಾವರ ಮೇಲಿನ ಮೊಗೆರು ನಿವಾಸಿ ಶ್ರೀಮತಿ ಗೌರಿ ಇವರ ಮನೆಗೆ ವಿದ್ಯುಚ್ಛಕ್ತಿ ಸಂಪರ್ಕ ನೀಡಿ ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಒಂದು ಬಡ ಕುಟುಂಬಕ್ಕೆ ಬೆಳುಕು ನೀಡುವುದರ ಮೂಲಕ ಸ್ವಾಂತ್ರತ್ಯವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷರಾದ ಜಯಚಂದ್ರ ಕೊಟ್ಟಾರಕ್ರಾಸ್ ಹಾಗೂ ಗುತ್ತಿಗೆದಾರ ಸಂಘ ಮಂಗಳೂರು ಉಪಸಮಿತಿಯ ಅಧ್ಯಕ್ಷರಾದ ಕೆ . ಉಮ್ಮರ್ ಹರ್ ಘರ್ ತಿರಂಗಾ ಅಭಿಮಾನದ ಅಂಗವಾಗಿ ಮನೆಗೆ ರಾಷ್ಟ್ರ ಧ್ವಜ ನೀಡಿದರು.
ವಿದ್ಯುಚ್ಚಕ್ತಿ ಸಂಪರ್ಕದ ಕೆಲಸ ಕಾರ್ಯ ಗಳಿಗೆ ಸಂಪೂರ್ಣವಾಗಿ ಸಹಕರಿಸಿದ ಅಕ್ಷಾತ ಇಲೆಕ್ಟ್ರಿಕಲ್ಸ್ ಮಾಲಕರಾದ ಲೋಕನಾಥ್ ಕುಲಾಲ್ , ಮಾಜಿ ಅಧ್ಯಕ್ಷರಾದ ಕೆ ಉಮ್ಮರ್ , ಉಪಾಧ್ಯಕ್ಷರಾದ ಸುಮಿತ್ ರಾಜ್ ಇವರನ್ನು ಅಭಿನಂದಿಸಲಾಯಿತು.
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುಚ್ಛಕ್ತಿ ಗುತ್ತಿಗೆದಾರರ ಸಂಘದ ಮಂಗಳೂರು ಸಮಿತಿಯ ಸದಸ್ಯರುಗಳಾದ ವಸಂತ್,
ಮಹಮ್ಮದ್, ರಘುಪತಿ ನಾಯಕ್, ಚಂದ್ರಹಾಸ ಕಟ್ಟೆಪುನಿ, ಪ್ರವೀಣ್, ಲ್ಯಾನ್ಸಿ ಫರ್ನಾಂಡಿಸ್, ಪ್ರಶಾಂತ್, ಇಬ್ರಾಹಿಂ , ಹರೀಂದ್ರ, ಜಮಾಲ್, ವಿನ್ಸೆಂಟ್ ಪಿಂಟೊ , ಪ್ರಕಾಶ್ ರಾಡ್ರಿಗಸ್, ಮಂಜುನಾಥ್, ಉಮಾನಾಥ್, ದಿನಕರ್ ಹಾಗೂ ವೇದಿಕೆಯ ಮಾಜಿ ಅಧ್ಯಕ್ಷರಾದ ಪ್ರಕಾಶ್ ಕೋಡಿಕಲ್, ಕ್ರೀಡಾ ಕಾರ್ಯದರ್ಶಿ ಅಜಿತ್ ಕಾಪಿಕಾಡ್ ಸಾಂಸ್ಕೃತಿಕ ಕಾರ್ಯ ದರ್ಶಿ ರವಿ ಕಾಪಿಕಾಡ್ , ನವೀನ್ ಕೊಡಿಯಾಲ್ ಬೈಲ್ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷರುಗಳಾದ ಕಿರಣ್ ಕೊಡಿಯಾಲ್ ಬೈಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ರಘುವೀರ್ ಬಾಬುಗುಡ್ಡ ಪ್ರಾಸ್ತವಿಸಿದರು, ಪ್ರಧಾನ ಕಾರ್ಯದರ್ಶಿ ಪ್ರತಾಪ್ ಕದ್ರಿ ಧನ್ಯವಾದವಿತ್ತರು. ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.















