ತುಂಬೆ ಗ್ರಾಮ ಪಂಚಾಯತ್ ಮತ್ತು ಅಂಚೆ ಕಛೇರಿ ಮಂಗಳೂರು ಇದರ ಸಹಯೋಗದಲ್ಲಿ ಆ.23ರಂದು ತುಂಬೆ ಗ್ರಾ ಪಂ ಅಂಚೆ ಕಛೇರಿಯಲ್ಲಿ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಜೋಡಣಾ ಕಾರ್ಯಕ್ರಮ ನಡೆಯಿತು.
ತುಂಬೆ ಗ್ರಾ ಪಂ ಅಧ್ಯಕ್ಷ ಪ್ರವೀಣ್ ಬಿ ತುಂಬೆ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಐದು ವರ್ಷದೊಳಗಿನ ಮಕ್ಕಳ ಆಧಾರ್ ನೊಂದಾವಣೆ ಹಾಗೂ ಕೇಂದ್ರ ಸರಕಾರದ ಸಹಭಾಗಿತ್ವದೊಂದಿಗೆ TATA AIG INSURANCE IPPB ಖಾತೆಯ ಬಗ್ಗೆ ಈ ಸಂದರ್ಭದಲ್ಲಿ ಮಾಹಿತಿಯನ್ನು
ನೀಡಿದರು.
ಪಂ. ಸದಸ್ಯರಾದ ಇಬ್ರಾಹಿಂ ವಳವೂರು, ಕಿಶೋರ್ ರಾಮಲ್ ಕಟ್ಟೆ, ಗ್ರಾಮಸ್ಥರಾದ ನಿಸಾರ್ ಅಹಮ್ಮದ್ ವಳವೂರು, ಜಯ ದೇಮುಂಡೆ, ಸಂಜೀವ ಭಂಡಾರಿ, ಪಂಚಾತ್ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪೋಸ್ಟ್ ಮಾಸ್ಟರ್ ರೇಖಾ ಚೌಟ ಸ್ವಾಗತಿಸಿ,ಅಶ್ವಿನಿ ಧನ್ಯವಾದವಿತ್ತರು.















