Coastal Bulletin

ಬಂಟ್ವಾಳ: ಕಳೆದ ಎಪ್ಪತ್ತೈದು ವರ್ಷಗಳಿಂದ ಹಂತ ಹಂತವಾಗಿ ದೇಶ ಪ್ರಗತಿಪಥದ ಕಡೆಗೆ ಸಾಗಿದೆ. ಅಂದು ಮಹಾತ್ಮಾ ಗಾಂಧೀಜಿ ಸ್ವಾತಂತ್ರ್ಯಕ್ಕೆ ಕರೆ ನೀಡಿದಾಗ ಇಡೀ ದೇಶ ಒಂದಾಗಿ ಅವರ ಜೊತೆಗೆ ಇತ್ತು. ಅಂದು ಸಾಮಾಜಿಕ ಜಾಲತಾಣ ಮತ್ತು ಟಿವಿ ಚಾನೆಲ್ ಇಲ್ಲದಿದ್ದರೂ ಪರಸ್ಪರ ಮನಸ್ಸಿನಿಂದ ಮನಸ್ಸಿಗೆ ಹೃದಯದಿಂದ ಹೃದಯಕ್ಕೆ ಬೆಸೆಯುತ್ತಿದ್ದರು ಎಂದು ನಿವೃತ್ತ ಪ್ರಾಂಶುಪಾಲ ಉದಯ ಕುಮಾರ್ ಇರ್ವತ್ತೂರು ಹೇಳಿದರು.

ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ 75ನೇ ಸ್ವಾತಂತ್ರ್ಯ ಸಂಭ್ರಮಾಚರಣೆ ಪ್ರಯುಕ್ತ ಇಲ್ಲಿನ ಮಣಿಹಳ್ಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದ ಬೃಹತ್ ಕಾಲ್ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ನೈಜ ದೇಶ ಪ್ರೇಮಿಗಳು ಕಾಟಾಚಾರಕ್ಕೆ ಧ್ವಜಾರೋಹಣ ನೆರವೇರಿಸುವುದಿಲ್ಲ. ಮಹಾತ್ಮಾ ಗಾಂಧೀಜಿಯನ್ನು ಹತ್ಯೆ ಮಾಡಿದವರು ಇಂದು ಸ್ವಾಂತಂತ್ರ್ಯ ಬಗ್ಗೆ ಭಾಷಣ ಮಾಡುತ್ತಾರೆ. ಪಂಡಿತ್ ಜವಾಹರ ಲಾಲ್ ನೆಹರೂ ಅವರಿಗೆ ಅಪಮಾನ ಮಾಡುವವರು ನೈಜ ದೇಶದ್ರೋಹಿಗಳು ಎಂದರು.

ಈ ದೇಶಕ್ಕೆ ಜಾತ್ಯಾತೀತ ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂದು ವಿದೇಶಿ ಪತ್ರಿಕೆಗಳು ಅಂದು ಸುದ್ದಿ ಮಾಡಿದೆ. ಅಂದಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗದಿದ್ದರೂ ಇಂದಿನ 75ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ನಾವೆಲ್ಲರೂ ಧನ್ಯರು ಎಂದರು.

ವಿಧಾನಪರಿಷತ್ ಸದಸ್ಯರಾದ ಕೆ.ಹರೀಶ ಕುಮಾರ್, ಡಾ.ಮಂಜುನಾಥ ಭಂಡಾರಿ, ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಮಮತಾ ಡಿ.ಎಸ್ ಗಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ಯಾಲೆಟ್ ಪಿಂಟೋ ಮಾತನಾಡಿದರು. 

ಮಣಿಹಳ್ಳದಿಂದ ಹೊರಟು ಬೈಪಾಸ್ ಜಂಕ್ಷನ್, ಬಿ.ಸಿ.ರೋಡು ನಾರಾಯಣ ಗುರು ವೃತ್ತ, ಪಾಣೆಮಂಗಳೂರು ಸತ್ಯದೇವತಾ ಗುಡಿ, ಮೆಲ್ಕಾರ್, ಆಲಡ್ಕ, ಪಾಣೆಮಂಗಳೂರು ಮೂಲಕ ಬಿ.ಸಿ.ರೋಡು ಕೈಕಂಬದ ಪೊಳಲಿ ದ್ವಾರ ಬಳಿ ಜಾಥಾ ಸಮಾಪನಗೊಂಡಿತು. ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರಧ್ವಜ ಹಿಡಿದು ದೇಶಭಕ್ತಿ ಸಂಗೀತ ಸಹಿತ ಘೋಷಣೆ ಕೂಗಿದರು.

ಸಮಾರೋಪ: 

ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮರೊಳ್ಳಿ ಸಮಾರೋಪ ಭಾಷಣ

ಮಾಡಿದರು. ಸ್ವತಃ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿ ಸುಳ್ಳು ಮತ್ತು ಭಾವನಾತ್ಮಕ ಭಾಷಣದಿಂದಲೇ ಗೆಲುವು ಕಂಡಿದ್ದ ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರನ್ನು ಸೋಲಿಸುವ ತನಕ ಕಾಂಗ್ರೆಸ್ ಹೋರಾಟ ಮುಂದುವರಿಯಲಿ ಎಂದರು.

ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್.ರಾಡ್ರಿಗಸ್, ಪ್ರಮುಖರಾದ ಎಂ.ಎಸ್.ಮಹಮ್ಮದ್, ಬಿ.ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಸುದರ್ಶನ್ ಜೈನ್, ಅಬ್ಬಾಸ್ ಆಲಿ, ಜಯಂತಿ ಪೂಜಾರಿ, ಲವಿನಾ ವಿಲ್ಮಾ ಮೊರಾಸ್, ಮಲ್ಲಿಕಾ ಶೆಟ್ಟಿ, ಮಲ್ಲಿಕಾ ಪಕ್ಕಳ, ಐಡಾ ಸುರೇಶ್, ಸೇವಾದಳ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜ, ಕಾರ್ಯದರ್ಶಿ ವೆಂಕಪ್ಪ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಜೋರಾ, ಇಬ್ರಾಹಿಂ ನವಾಜ್, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ, ಸಂಪತ್ ಕುಮಾರ್ ಶೆಟ್ಟಿ, ಸದಾಶಿವ ಬಂಗೇರ, ದಯಾನಂದ ಶೆಟ್ಟಿ ಅಮೈ, ದೇವಪ್ಪ ಕುಲಾಲ್, ಮಹಮ್ಮದ್ ನಂದರಬೆಟ್ಟು, ಜನಾರ್ದನ ಚಂಡ್ತಿಮಾರ್, ಮಹಮ್ಮದ್ ನಂದಾವರ, ಮಧುಸೂದನ್ ಶೆಣೈ, ಸುಭಾಶ್ಚಂದ್ರ ಶೆಟ್ಟಿ ಕುಲಾಲ್, ಈಶ್ವರ ಭಟ್ ಪಂಜಿಗದ್ದೆ, ರೋಶನ್ ರೈ, ಚಂದ್ರಶೇಖರ ಪೂಜಾರಿ, ಜಗದೀಶ್ ಕೊಯಿಲ, ವಾಸು ಪೂಜಾರಿ, ಲೋಲಾಕ್ಷ ಶೆಟ್ಟಿ ಗಂಗಾಧರ ಪೂಜಾರಿ, ಉಮೇಶ ಬೋಳಂತೂರು, ಆಲ್ಫೋನ್ಸ್ ಮಿನೇಜಸ್, ಆಲ್ಬಟ್ರ್ ಮಿನೇಜಸ್ ಮತ್ತಿತರರು ಇದ್ದರು.

Leave a Comment