Coastal Bulletin

ಬಂಟ್ವಾಳ : ಸರಪಾಡಿಯಲ್ಲಿ ಆ. 23,24ರಂದು ನಡೆದ ಜೇನು ಕೃಷಿ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಶಿಬಿರವು ಮಂಗಳವಾರ ಸಮಾಪನಗೊಂಡಿತು.

ಶಿಬಿರದಲ್ಲಿ ಭಾಗವಹಿಸಿದ ಕೃಷಿಕರಿಗೆ ಮಣಿನಾಲ್ಕೂರು ಹಂಡ್ಯೂರು ಗೋಪಾಲ ಪ್ರಭು ಅವರ ತೋಟದಲ್ಲಿ ಜೇನು ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.ವಿಶ್ರಾಂತ ಶಿಕ್ಷಕ, ಜೇನು ಕೃಷಿತಜ್ಞ ಕೃಷ್ಣ ಭಟ್ ಮಾಣಿ ಸ್ವತ: ಜೇನು ಎರಿಗಳನ್ನು ತೋರಿಸಿ ವಿವರ ನೀಡಿದರು.

ಸಮಾರೋಪದಲ್ಲಿ ಮಣಿನಾಲ್ಕೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಮಯ್ಯ ತರಬೇತಿ ಹೊಂದಿದ ರೈತರಿಗೆ ಪ್ರಮಾಣ

ಪತ್ರ ವಿತರಿಸಿದರು.ತೋಟಗಾರಿಕೆ ಇಲಾಖೆ ಜೇನು ಅನುವುಗಾರ ಹರೀಶ್ ತರಬೇತಿ ಪಡೆದವರಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು.ತೆಂಗು ಸೌಹಾರ್ದ ಸಹಕಾರಿ ನಿ. ಬಿ. ಸಿ. ರೋಡ್ ಅಧ್ಯಕ್ಷ ರಾಜಾ ಬಂಟ್ವಾಳ್ ಸ್ವಾಗತಿಸಿದರು. ಮಣಿನಾಲ್ಕೂರು ಸೇವಾ ಸಹಕಾರಿಯ ಮುಖ್ಯಕಾರ್ಯನಿರ್ವಾಹಕ ಹೆಚ್. ಸುಧಾಕರ ಶೆಟ್ಟಿ ವಂದಿಸಿದರು.ಸೌಹಾರ್ದ ಸಹಕಾರಿ ಮುಖ್ಯಕಾರ್ಯನಿರ್ವಾಹಕ ಹರ್ಷಿತ್ ಕಾರ್ಯಕ್ರಮ ನಿರ್ವಹಿಸಿದರು.

Leave a Comment