ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರ ಯಶಸ್ವಿ ಸಂಚಾರಿ ಐಸಿಯು ಅಂಬ್ಯುಲೆನ್ಸ್ ಬಸ್ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆಯನ್ನು ನೀಡಲು ಕೆ ಎಸ್ ಆರ್ ಟಿ ಸಿ ಮತ್ತು ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸಂಚಾರಿ ಬಸ್ ಇಂದು ಮಾಣಿ ಗ್ರಾಮಕ್ಕೆ ತಲುಪಿತು.
ತಾಲೂಕಿನ ಮಾಣಿ ಗ್ರಾಮ ಪಂಚಾಯತ್ ನ ವ್ಯಾಪ್ತಿಯಲ್ಲಿ ಆರೋಗ್ಯ ಸೇವೆಯನ್ನು ನೀಡಿತು.ಗ್ರಾಮದ ಹಲವಾರು ಜನ ಇದರ ಸದುಪಯೋಗ ಪಡೆದು ಕೊಂಡರು,12 ಮಕ್ಕಳು 50 ಜನ ಹಿರಿಯರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು ಹಾಗೂ 5 ಜನ ಇ ಸಿ ಜಿ ಯ ತಪಾಸಣೆ ಮಾಡಿಸಿದರು.
ಈ ಸಂದರ್ಭದಲ್ಲಿ ಗಣೇಶ್ ರೈ ಮಾಣಿ,ನಾರಾಯಣ
ಶೆಟ್ಟಿ ಪಂಚಾಯತ್ ಸದಸ್ಯರು, ಪುಷ್ಪರಾಜ ಚೌಟ ನೆರಳಕಟ್ಟೆ ಅಧ್ಯಕ್ಷರು, ಸನತ್ ರೈ, ತಣಿಯಪ್ಪ ಗೌಡ,ಹರೀಶ್ ಕುಲಾಲ್, ಪ್ರಮಿತ್ ಶೆಟ್ಟಿ, ಅಶೋಕ್ ಶೆಟ್ಟಿ, ವನಿತಾ, ಕರುಣಾಕರ ಪೂಜಾರಿ, ಹರೀಶ್, ಶಾಲಾ ಸಮಿತಿ ಅಧ್ಯಕ್ಷರು, ಮುಖ್ಯ ಶಿಕ್ಷಕಿ ಚಂದ್ರಾವತಿ ಹಾಗೂ ಭವಾನಿ ಶೆಟ್ಟಿ, ನರಸಿಂಹ ಶೆಟ್ಟಿ, ಯತೀಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.














