ಮಂಗಳೂರು : ಬಪ್ಪನಾಡು ದೈವಸ್ಥಾನದ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಮಾಡುವ ವಿಷಯ ಭಾರಿ ಚರ್ಚೆಗೆ ಒಳಗಾಗಿದೆ.
ಹಿಂದೂ ಧಾರ್ಮಿಕ ಮುಖಂಡ ಹರಿಕೃಷ್ಣ ಪುನರೂರು ಸುದ್ದಿಗಾರರ ಜೊತೆ ಮಾತನಾಡಿ, ಸರ್ವೆ ಜನ ಸುಖಿನೋ ಭವಂತು ಅನ್ನುವ ಈ ದೇಶದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಕೆಲಸ ಮಾಡಿ ಜೀವನ ನಡೆಸಲು ಜಾತಿ ಧರ್ಮ ನೋಡುವುದು ಸರಿಯಲ್ಲ ಎಂದರು.
ಬಪ್ಪನಾಡು ಕ್ಷೇತ್ರಕ್ಕೆ ಬಪ್ಪ ಬ್ಯಾರಿ ಎಂಬ ಮುಸ್ಲಿಂ ವ್ಯಕ್ತಿ ಜಿರ್ಣೋದ್ಧಾರ ಮಾಡಿದ್ದು ಎಂಬ ಪ್ರತೀತಿ ಇದೆ. ಈ ಕ್ಷೇತ್ರದಲ್ಲಿ ಎಲ್ಲಾ ಧರ್ಮಗಳಿಗೂ ಸಮಾನ ಅವಕಾಶವಿದೆ
ಎಂದರು.
ದೇವಸ್ಥಾಸದ ಆಡಳಿತ ಯಾವತ್ತೂ ತಾರತಮ್ಯ ಮಾಡೋದಿಲ್ಲ. ಕೆಲವರು ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು ಅಂತಾ ಮನವಿ ನೀಡಿದ್ದರು. ಆದರೆ ಈ ವಿಚಾರದಲ್ಲಿ ಆಡಳಿತ ಮಂಡಳಿಯ ನಿರ್ಧಾರವನ್ನು ತಿಳಿಸಿದ್ದಾರೆ. ದೇವರ ಪಾವಿತ್ರ್ಯತೆಗೆ ದಕ್ಕೆ ಬರುವ ಕೆಲಸ ಮಾಡಬಾರದು. ವ್ಯಾಪಾರ ಮಾಡಲು ಎಲ್ಲರಿಗೂ ಅವಕಾಶವಿದೆ. ಆದರೆ ದೇವಸ್ಥಾನದ ಅನುಮತಿ ಬೇಕು ಎಂದು ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸ್ತರ ಮನೋಹರ್ ಶೆಟ್ಟಿ ಹೇಳಿದರು.














