ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು -ಕಡೇಶಿವಾಲಯ ಗ್ರಾಮದ ಕೆ. ಆರ್. ಡಿ. ಸಿ. ಎಲ್ 2014ರಲ್ಲಿ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ಸರ್ಕಾರ ದಿಂದ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರ ಮುತುವರ್ಜಿಯಲ್ಲಿ ಮಂಜೂರದ ಕಡೇಶಿವಾಲಯ ಹಾಗೂ ಅಜಿಲಮೊಗರು ಸಂಪರ್ಕ ಸೌಹಾರ್ದ ಸೇತುವೆಯು ಸ್ಥಗಿತಗೊಂಡಿದ್ದು ಈ ನಿಟ್ಟಿನಲ್ಲಿ ಕಾಮಗಾರಿಯು ಪುನರ್ ಪ್ರಾರಂಭಿಸಲು ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು(KRDCL)ಇದರ ಮುಖ್ಯ ಅಧಿಕಾರಿಗಳ ತಂಡದ ಜೊತೆ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿ ಅಲ್ಪ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಆದೇಶ ಮಾಡಿದರು. ಇದರ ಪ್ರಕಾರ KRDCL ಅಧಿಕಾರಿಗಳು 2024ರ ಜುಲೈ ತಿಂಗಳಿನಲ್ಲಿ ಸೌಹಾರ್ದ ಸೇತುವೆಯ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಯ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್,ಬೇಬಿ ಕುಂದರ್, ಅಬ್ಬಾಸ್ ಅಲಿ, ಸಂಪತ್ ಕುಮಾರ್, ಶಿವಪ್ಪ ಪೂಜಾರಿ, ಕಾಂಚಲಕ್ಷಿ, ವಿಮಲಾ ಪಂಚಾಯತ್ ಅಧ್ಯಕ್ಷರು, ಇಕ್ರ ಖದರ್,ಅಬ್ದುಲ್ ಹಮೀದ್ ಯಾನೆ ಚೇರಿಮೋನು, ಸುರೇಶ್ ಪೂಜಾರಿ, ದಾವೂದ್, ಈಶ್ವರ ಪೂಜಾರಿ, ಹರಿಶ್ಚಂದ್ರ
ಕಾಡಬೆಟ್ಟು, ಸಂಜೀವ ಕಡೇಶಿವಾಲಯ,ಸಂಜೀವ ಪೂಜಾರಿ ದಾಸಕೋಡಿ, ಫಾರೂಕ್, ಗೀತಾ, ಸಂಜೀವ ಪೂಜಾರಿ ಕಟ್ಟಡದೆ ದಿನೇಶ್ ಭಟ್, ಪುವಪ್ಪ ಪೂಜಾರಿ ಆಗಚರಕೋಡಿ, ವಿಜಯ ಕುಮಾರ್ ಎಸ್, ಶೀನಾ ನಾಯ್ಕ, ನಳಿನಾಕ್ಷಿ, ರತ್ನಕಾರ ನಾಯ್ಕ, ಪುರುಷೋತ್ತಮ ಶೆಟ್ಟಿ,ಸಲೀಂ ಕಜೆ,ಪುವಪ್ಪ ಮುಂಡು ಪ್ರಮುಖರದವರು ಉಪಸ್ಥಿತರಿದ್ದರು















