ತುಂಬೆ :ಡಿ.30ರಂದು ಸರ್ಕಾರಿ ಶಾಲೆಯ ವಾರ್ಷಿಕ ಸಂಭ್ರಮ ಹಾಗೂ ಹಳೇ ವಿದ್ಯಾರ್ಥಿಗಳ ಸಾಂಸ್ಕೃತಿಕ ವೈವಿದ್ಯ.

Coastal Bulletin
ತುಂಬೆ :ಡಿ.30ರಂದು ಸರ್ಕಾರಿ ಶಾಲೆಯ ವಾರ್ಷಿಕ ಸಂಭ್ರಮ ಹಾಗೂ ಹಳೇ ವಿದ್ಯಾರ್ಥಿಗಳ ಸಾಂಸ್ಕೃತಿಕ ವೈವಿದ್ಯ.

ಬಂಟ್ವಾಳ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತುಂಬೆ ಇಲ್ಲಿನ ಶಾಲಾ ವಾರ್ಷಿಕ ಸಂಭ್ರಮ ಹಾಗೂ ಹಳೇ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವು ಡಿ.30ರಂದು ಶನಿವಾರ ಅಪರಾಹ್ನ ಗಂಟೆ 2-30ಯಿಂದ ಶಾಲೆಯ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ನಡೆಯಲಿದೆ,

ಅಪರಾಹ್ನ2.30ಯಿಂದ ಶಾಲಾ ಮಕ್ಕಳಿಂದ ವಿವಿಧ ವಿನೋದವಳಿಗಳು 3.30ಯಿಂದ ಸಭಾ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ, ಸಂಜೆ ಗಂಟೆ 4-30ರಿಂದ ಹಳೇ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ,

6-00ರಿಂದ ಹವ್ಯಾಸಿ ಕಲಾವಿದರಿಂದ ಉದ್ಯಾವರ ಪದ್ಮನಾಭ ಮಾಸ್ತರ್‌ರವರ ನಿರ್ದೇಶನದಲ್ಲಿ ಪ್ರವೀಣ್ ಬಿ. ತುಂಬೆ ಸಂಯೋಜನೆಯಲ್ಲಿ"ಭ್ರಗು ಶಾಪ" ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment