ನೆತ್ತರಕೆರೆ :ನ. 30ರಂದು ಸಾಮೂಹಿಕ ಶ್ರೀ ಶನೈಶ್ಚರ ಪೂಜೆ,ಧಾರ್ಮಿಕ ಸಭೆ ಹಾಗೂ ಯಕ್ಷಗಾನ ಬಯಲಾಟ. ನ.23ರಿಂದ 30 ತನಕ ಸಾಮೂಹಿಕ ಎಳ್ಳುಗಂಟು ದೀಪೋತ್ಸವ.

Coastal Bulletin
ನೆತ್ತರಕೆರೆ :ನ. 30ರಂದು ಸಾಮೂಹಿಕ ಶ್ರೀ ಶನೈಶ್ಚರ ಪೂಜೆ,ಧಾರ್ಮಿಕ ಸಭೆ ಹಾಗೂ ಯಕ್ಷಗಾನ ಬಯಲಾಟ. ನ.23ರಿಂದ 30 ತನಕ ಸಾಮೂಹಿಕ ಎಳ್ಳುಗಂಟು ದೀಪೋತ್ಸವ.

ಬಂಟ್ವಾಳ :ಗ್ರಾಮ ವಿಕಾಸ ಪ್ರತಿಷ್ಠಾನ ಹಾಗೂ ಶ್ರೀ ಶನೈಶ್ಚರ ಪೂಜಾ ಸೇವಾ ಸಮಿತಿ ನೆತ್ತರಕೆರೆ, ಕಳ್ಳಿಗೆ,ಇದರ ಆಶ್ರಯದಲ್ಲಿ ನ. 23ರಿಂದ 30 ತನಕ ಸಂಜೆ 6.30ಯಿಂದ 7.30ತನಕ ಸಾಮೂಹಿಕ ಎಳ್ಳುಗಂಟು ದೀಪೋತ್ಸವ ಹಾಗೂ ನ. 30ರಂದು ಸಾಮೂಹಿಕ ಶ್ರೀ ಶನೈಶ್ಚರ ಪೂಜೆ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮವು ನೆತ್ತರಕೆರೆ ಶಾಲಾ ಮೈದಾನದಲ್ಲಿ ನಡೆಯಲಿದೆ.

ನ. 30ರಂದು ಶನಿವಾರ ಬೆಳಿಗ್ಗೆ ಭಾಗ್ಯ ಸೂಕ್ತ ಹೋಮ, ಐಕ್ಯ ಮತ್ಯ ಹೋಮ ನಡೆಯಲಿದ್ದು, ಸಂಜೆ ಸಾಮೂಹಿಕ

ಶ್ರೀ ಶನೈಶ್ಚರ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

Leave a Comment