ಬಂಟ್ವಾಳ :ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಕಾರಿಂಜ ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮವು ಆದಿತ್ಯವಾರ ಬೆಳಿಗ್ಗೆ 7.30ಗಂಟೆಯಿಂದ ನಡೆಯಲಿದೆ.
ಹಿಂ. ಜಾ ವೇ ತಾಲೂಕು ಅಧ್ಯಕ್ಷರಾದ ತಿರುಲೇಶ್ ಬೆಳ್ಳೂರ್ ತಮ್ಮ ಪ್ರಕಟಣೆಯಲ್ಲಿ , ಪುಣ್ಯ ಕ್ಷೇತ್ರಗಳ ಪವಿತ್ರ್ಯತೆಯ ಉಳಿವಿಗಾಗಿ ನಮ್ಮ ಹೋರಾಟದ ಪ್ರಥಮ
ಹೆಜ್ಜೆಯಾಗಿ ಈ ಕಾರ್ಯಕ್ರಮ ನಡೆಯಲಿದೆ ಎಂದರು. ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಹಾಗೂ ಹಿಂದೂ ಬಾಂಧವರು ಪಾಲ್ಗೊಂಡು ಯಶಸ್ವೀಗೊಳಿಸಬೇಕೆಂದು ಅವರು ವಿನಂತಿಸಿದ್ದಾರೆ.
















