ಮಂಗಳೂರು: ಮಿತವ್ಯಯದಲ್ಲಿ ಗುಣಮಟ್ಟದ ಶಿಕ್ಷಣದಿಂದ ಗುರುತಿಸಿಕೊಂಡಿರುವ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎ.ಐ.ಸಿ.ಟಿ.ಇ ಅನುಮೋದನೆಯೊಂದಿಗೆ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಗೆ ಸಂಬಂಧಿಸಿದಂತೆ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಷೀನ್ ಲರ್ನಿಂಗ್ , ಕಂಪ್ಯೂಟರ್ ಸೈನ್ಸ್ ಆ್ಯಂಡ್ ಡಿಸೈನ್ ಹಾಗೂ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಬ್ಯುಸಿನೆಸ್ ಸಿಸ್ಟಮ್ ಎಂಬ ಮೂರು ಹೊಸ ಬಿ.ಇ. ಪದವಿ ಕೋರ್ಸ್ ಗಳನ್ನು ಆರಂಭಿಸಲಾಗಿದೆ. ಇದರೊಂದಿಗೆ ಎನ್.ಬಿ.ಎ. ಮಾನ್ಯತೆ ಪಡೆದ ಕಂಪ್ಯೂಟರ್ ಸೈನ್ಸ್, ಇನ್ಫಾರ್ಮಶನ್ ಸೈನ್ಸ್, ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸ್ ಗಳು ಎಂದಿನಂತೆ ಮುಂದುವರೆಯಲಿವೆ.
ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕಂಪ್ಯೂಟರ್ ಸೈನ್ಸ್ನ ಕೃತಕ ಬುದ್ಧಿಮತ್ತೆ, ಸಮಕಾಲೀನ ತಂತ್ರಜ್ಞಾನದ ಜತೆಗೆ ವ್ಯಾವಹಾರಿಕ ಕೌಶಲ, ವಿನ್ಯಾಸ ತಂತ್ರಜ್ಞಾನದ ಹೊಸ ಮಜಲುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಆಸಕ್ತ
ವಿದ್ಯಾರ್ಥಿಗಳಿಗೆ ಹೊಸ ಕೋರ್ಸ್ ಗಳು ಮುಂದಿನ ದಿನಗಳಲ್ಲಿ ಉಜ್ಚಲ ಭವಿಷ್ಯದ ಜತೆಗೆ ಉದ್ಯೋಗಾವಕಾಶಗಳನ್ನೂ ಒದಗಿಸಲು ಸಹಕಾರಿಯಾಗಲಿವೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ತಿಳಿಸಿದ್ದಾರೆ.















