ಬಂಟ್ವಾಳ ತಾಲ್ಲೂಕಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಅನ್ನದಾನ ಸೇವೆಗೆ 80ರ ಹರೆಯದ ಅಶ್ವತ್ತಮ್ಮ ಎಂಬವರು ರೂ 1ಲಕ್ಷ ಮೊತ್ತದ ದೇಣಿಗೆ ಹಸ್ತಾಂತರಿಸಿದರು.
ಬಂಟ್ವಾಳ:ಇಲ್ಲಿನ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಬಳಿ 'ಭವತಿ ಭಿಕ್ಷಾಂದೇಹಿ' ಎನ್ನುತ್ತಾ ಭಿಕ್ಷಾಟನೆ ನಡೆಸಿ ಸಂಪಾದಿಸಿದ ರೂ 1ಲಕ್ಷ ಮೊತ್ತ ಇಲ್ಲಿ ನಡೆಯುವ ಅನ್ನದಾನ ಸೇವೆಗೆ ಶುಕ್ರವಾರ ದೇಣಿಗೆ ನೀಡುವ ಮೂಲಕ 80ರ ಹರೆಯದ ಮಹಿಳೆಯೊಬ್ಬರು ಗಮನ
ಸೆಳೆದಿದ್ದಾರೆ.
ಅಶ್ವತ್ತಮ್ಮ ಎಂಬವರು ಭಿಕ್ಷಾಟನೆ ನಡೆಸಿ ಈ ರೀತಿ ದೇಣಿಗೆ ನೀಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ದೇವಳದ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ, ಪ್ರಧಾನ ಅರ್ಚಕ ಮಾಧವ ಭಟ್, ನಾಗೇಶ್ ರಾವ್, ವೆಂಕಟೇಶ್ ನಾವಡ, ನಾಗೇಶ್ ಪೊಳಲಿ, ದೇವಪ್ಪ ಕುಲಾಲ್, ನವೀನ್ ಪೊಳಲಿ ಮತ್ತಿತರರು ಇದ್ದರು.














