ಮಂಗಳೂರು: ಇಂದಿನ ಯುವ ಪೀಳಿಗೆ ಮಾನಸಿಕ ಅಸ್ಥಿರತೆಯನ್ನು ಎದುರಿಸುತ್ತಿದ್ದಾರೆ. ಮಾನಸಿಕ ಅಸ್ಥಿರತೆಯಿಂದಾಗಿ ಆತ್ಮಹತ್ಯೆಯಂತಹ ಅಘಾತಕಾರಿ ಮನೋಸ್ಥಿತಿಯನ್ನು ತಲುಪುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಮಾನ್ಸ್, ಮನಶಾಂತಿ, ಲೈಫ್‌ಲೈನ್ ಹಾಗೂ ಫಾದರ್ ಮುಲ್ಲಸ್೯ ನಂತಹ ಸಂಸ್ಥೆಗಳು ಶ್ಲಾಘನೀಯ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಕರ್ನಾಟಕ ಬ್ಯಾಂಕಿನ ಜನರಲ್ ಮೆನೇಜರ್ ಸುಮನಾ ಘಾಟೆ ಹೇಳಿದರು. ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಆತ್ಮಹತ್ಯಾ ನಿಯಂತ್ರಣ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮನಶಾಂತಿ ಸಮಾಲೋಚನ ಸಂಶೋಧನ ಹಾಗೂ ತರಬೇತಿ ಕೇಂದ್ರದ ವ್ಯವಸ್ಥಾಪಕರಾದ ಡಾ. ರಮೀಳಾ ಶೇಖರ್, ಫಾದರ್ ಮುಲ್ಲಸ್೯ ಮೆಡಿಕಲ್ ಕಾಲೇಜಿನ ಡಾ. ಅವಿನಾಶ್ ಶೇಖರ್, ಸುಹೇಗ್ ಚಾರಿಟೇಬಲ್ ಟ್ರಸ್ಟ್ ನ ಜ್ಯೋತಿ ಅವರು ಕಾರ್ಯಗಾರವನ್ನು ನಡೆಸಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಆಶಾಲತಾ ಎನ್ ಸುವರ್ಣ ಎಸ್ ಅವರು ಅಧ್ಯಕ್ಷತೆ ವಹಿಸಿದ್ದರು. ಸುಸ್ಯೆಡ್ ಲೈಫ್‌ಲೈನ್‌ನ ಒಲ್ಗಾ ನೊರೊನ್ನ ಹಾಗೂ ಫಾತಿಮ ಸರಾವೊ, ಕಾಲೇಜಿನ ಡೀನ್ ಅಕಾಡಮಿಕ್ ಡಾ.ಉಮ್ಮಪ್ಪ ಪೂಜಾರಿ
ಪಿ, ಉಪಸ್ಥಿತರಿದ್ದರು.
ರಮೀಳಾ ಶೇಖರ್ ಸ್ವಾಗತಿಸಿದರು.ಕಾರ್ಯಗಾರದ ಸಂಯೋಜಕರಾದ ಡಾ. ಜಯಪ್ರಕಾಶ್ ವಂದಿಸಿದರು. ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕರಾದ ಚರಿತ ಚಿನ್ನಪ್ಪ ನಿರೂಪಿಸಿದರು.
ಕಾರ್ಯಾಗಾರವು ನಿಮಾನ್ಸ್ ಬೆಂಗಳೂರು, ಮನಶಾಂತಿ ಸಮಾಲೋಚನ ಸಂಶೋಧನ ಹಾಗೂ ತರಬೇತಿ ಕೇಂದ್ರ ಮಂಗಳೂರು, ಫಾದರ್ ಮುಲ್ಲಸ್೯ ಮೆಡಿಕಲ್ ಕಾಲೇಜು ಮಂಗಳೂರು, ಸುಸ್ಯೆಡ್ ಲೈಫ್ ಲೈನ್ ಸುಹೇಗ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಹಾಗೂ ಐಕ್ಯುಎಸಿ ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜು ಮಂಗಳೂರು ಇವರ ಸಹಬಾಗಿತ್ವದಲ್ಲಿ ಮತ್ತು ಕರ್ಣಾಟಕ ಬ್ಯಾಂಕ್ ಲಿಮಿಟೆಡ್ ಇದರ ಪ್ರಯೋಜಕತ್ವದಲ್ಲಿ ನಡೆಯಿತು.














