Coastal Bulletin

ಬಂಟ್ವಾಳ: ಇಲ್ಲಿನ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನವು ಸುಮಾರು ರೂ 7 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿದ್ದು, ಇದೇ 26ರಂದು ಮಧ್ಯಾಹ್ನ 2ಗಂಟೆಗೆ ಬಿ.ಸಿ.ರೋಡಿನಿಂದ ಕೊಡಿಮರವನ್ನು ಭವ್ಯ ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ತರಲಾಗುವುದು ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಹೇಳಿದರು.

ಶರಭೇಶ್ವರ ಕ್ಷೇತ್ರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನೇತ್ರಾವತಿ ನದಿ ತಟದಲ್ಲಿ ಶ್ರೀ ಶರಭಂಗ ಮುನಿಗಳು ಪ್ರತಿಷ್ಠಾಪಿಸಿಕೊಂಡು ಅರ್ಚನೆ ಮಾಡಿದ್ದರು.ವಿಜಯ

ನಗರ ಸಾಮ್ರಾಜ್ಯದ ಸಾಮಂತ ಕೆಳದಿ ಅರಸರಿಂದ ನಿರ್ದೇಶಿಸಲ್ಪಟ್ಟು ಹಲ್ಸನಾಡು ವಂಶಜರಿಂದ ನಿರ್ಮಾಣಗೊಂಡಿದ್ದ ಶ್ರೀ ಶರಭೇಶ್ವರ ದೇವಾಲಯ ಇದೀಗ ಜೀರ್ಣೋದ್ಧಾರಗೊಳ್ಳುತ್ತಿದೆ.

Leave a Comment