Coastal Bulletin

ಬಂಟ್ವಾಳ::ಉತ್ತಮ ನಾಗರಿಕರ ಸೃಷ್ಟಿಗೆ ಶಾಲೆಯು ಪ್ರಮುಖ ಪಾತ್ರ ವಹಿಸುತ್ತದೆ. ಊರಿನ ಶಾಲೆ ಅಭಿವೃದ್ಧಿಗೆ ನಾವೆಲ್ಲರೂ ಜವಾಬ್ದಾರರು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು. ಇಲ್ಲಿನ ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಶತಮಾನೋತ್ಸವ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕರ್ನಾಟಕ ಬ್ಯಾಂಕ್‌ ಚೀಫ್ ಬ್ಯುಸಿನೆಸ್ ಆಫೀಸರ್ ಗೋಕುಲ್‌ದಾಸ್ ಪೈ ಶುಭ ಹಾರೈಸಿದರು.

ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ನೂತನ ಆವರಣಗೋಡೆ ಉದ್ಘಾಟಿಸಿದರು. ಕೊಡ್ಮಾನ್ ಗುತ್ತು ಮಂಜಯ್ಯ ಶೆಟ್ಟಿ, ಉಳಿಪಾಡಿಗುತ್ತು ಕುಸುಮ ಎಂ. ಶೆಟ್ಟಿ ಸಹಿತ ದಾನಿಗಳ ಭಾವಚಿತ್ರ ಅನಾವರಣ, ಸ್ಮರಣ ಸಂಚಿಕೆ “ಸ್ಮರಣಾಂಜಲಿ”ಯನ್ನು ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಯೋಗೀಶ್ ಕೈರೋಡಿ ಬಿಡುಗಡೆಗೊಳಿಸಿದರು.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಗೌರವಿಸಲಾಯಿತು. ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ಉದ್ಯಮಿ ಕೂರಿಯಾಳಗುತ್ತು ಮುಂಡಪ್ಪ ಪಯ್ಯಡೆ, ಬಡಗಬೆಳ್ಳೂರು

ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಪ್ರಕಾಶ್ ಆಳ್ವ, ಮುಖ್ಯಶಿಕ್ಷಕ ಕೆ.ಕೇಶವ ನಾಯ್ಕ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸುಧಾಕರ ಪೂಂಜ, ಕಟ್ಟಡ ಸಮಿತಿ ಗೌರವಾಧ್ಯಕ್ಷ ರಘು ಎಲ್.ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚೀಂದ್ರನಾಥ ರೈ, ಕಟ್ಟಡ ಸಮಿತಿ ಉಪಾಧ್ಯಕ್ಷ ದಯಾನಂದ ಬಿ., ಏಚಿಲ್ ಕವಿತಾ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

 ಕಟ್ಟಡ ಸಮಿತಿ ಅಧ್ಯಕ್ಷ ರಮೇಶ್ಚಂದ್ರ ಭಂಡಾರಿ ಪ್ರಾಸ್ತಾವನೆಗೈದರು. ಶಾಲಾ ಸಂಚಾಲಕ ಕೆ. ನರೇಂದ್ರನಾಥ ಭಂಡಾರಿ ಸ್ವಾಗತಿಸಿ, ನಿವೃತ್ತ ಶಿಕ್ಷಕ ಗಂಗಾಧರ ರೈ ವಂದಿಸಿದರು.


Leave a Comment