ಮಂಗಳೂರು: ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇನ್ಫರ್ಮೇಶನ್ ಸಯನ್ಸ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ತಾಂತ್ರಿಕ ಉತ್ಸಾಹಿಗಳ ಸಂಪರ್ಕದಿಂದ ನೂತನ ಆವಿಷ್ಕಾರಗಳ ಕುರಿತು ಪ್ರೇರಿತರಾಗುವ ಇನ್ಫೋವೇಶನ್ 2024 ತಾಂತ್ರಿಕ ಕಾರ್ಯಕ್ರಮ ಐಐಸಿ, ಗೀಕ್ ಹಬ್, ಇಂಡಸ್ಟ್ರಿ ಕನೆಕ್ಟ್ ಕ್ಲಬ್ ಸಹಯೋಗದಲ್ಲಿ ನಡೆಯಿತು.ಇಂಜಿನಿಯರಿಂಗ್ ನ ವಿವಿಧ ವಿಭಾಗದ ತಾಂತ್ರಿಕ ವಿದ್ಯಾರ್ಥಿಗಳು ಕಲೆತು ಹೊಸತನದ ಆವಿಷ್ಕಾರದ ಉತ್ಸಾಹಕ್ಕೆ ವೇದಿಕೆಯಾಗಿ ಈ ಕಾರ್ಯಕ್ರಮ ಜರಗಿತು.
ರಿಸರ್ಚ್ ಆಂಡ್ ಡೆವಲಪ್ಮೆಂಟ್ ಡೀನ್ ಡಾ.ಉದಯ್ ಕುಮಾರ್ ಶೆಣೈ ತಾಂತ್ರಿಕ ಜಾಗೃತಿ ಕುರಿತು ವಿವರಿಸಿದರು. ದೀಪ್ತಿ ಪ್ರಭು ಪ್ಲೇಸ್ ಮೆಂಟ್ ಒಳನೋಟಗಳು,ಬೆಳವಣಿಗೆಗಳ ಕುರಿತು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ನಾಗೇಶ್ ಹೆಚ್. ಆರ್. ಉಪ ಪ್ರಾಚಾರ್ಯ ಡಾ. ಡೇಮಿಯನ್ ಆಂಟನಿ ಡಿ ಮೆಲ್ಲೋ, ಎಕ್ರೆಡಿಟೇಶನ್ ಡೀನ್ ಡಾ. ಎನ್.
ವೆಂಕಟೇಶ್, ಐ ಎಸ್ ವಿಭಾಗ ಮುಖ್ಯಸ್ಥ ಡಾ ಹೆಚ್. ಮನೋಜ್ ಗಡಿಯಾರ್ ಸಕಾಲಿಕ ಮಾತುಗಳನ್ನಾಡಿದರು.
ಬ್ಲೈಂಡ್ ಕೋಡಿಂಗ್, ಎರರ್ ಎಕ್ಸಪೆಡಿಶನ್, ಯುಐ ಬ್ಯಾಟಲ್ ಮೊದಲಾದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗಿಯಾದರು.ಇನ್ಫರ್ಮೇಶನ್ ಸಯನ್ಸ್ ಅಂತಿಮ ವರ್ಷದ ವಿದ್ಯಾರ್ಥಿಗಳ ನಾಯಕತ್ವದಲ್ಲಿ ಬೋಧಕರಾದ ಗೀತಾಲಕ್ಷ್ಮೀ, ಸುಷ್ಮಾ ಎಂ.ಡಿ, ಶಿಲ್ಪಾ ಬಿ. ರಂಗನಾಥ್ ಕೆ. ಸಹಕಾರ ನೀಡಿದರು.















