ಕಂಜತ್ತೂರು: ಕಳ್ಳಿಗೆ ಹಿಂದೂ ರುದ್ರಭೂಮಿ ಸಮಗ್ರ ಅಭಿವೃದ್ಧಿಗೆ ಗುದ್ದಲಿ ಪೂಜೆ.

Coastal Bulletin
ಕಂಜತ್ತೂರು: ಕಳ್ಳಿಗೆ ಹಿಂದೂ ರುದ್ರಭೂಮಿ ಸಮಗ್ರ ಅಭಿವೃದ್ಧಿಗೆ ಗುದ್ದಲಿ ಪೂಜೆ.

ಬಂಟ್ವಾಳ : ಕಳ್ಳಿಗೆ ಹಿಂದೂ ರುದ್ರಭೂಮಿಯ ಸಮಗ್ರ ಅಭಿವೃದ್ಧಿಗೆ ಸುಮಾರು 10 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗೆ ಕಂಜತ್ತೂರಿನಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಜ್ಯೋತಿಷಿ ಅನಿಲ್ ಪಂಡಿತ್ ಗುದ್ದಲಿ ಪೂಜೆ ನೆರವೇರಿಸಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಶಶಿಧರ್ ಬ್ರಹ್ಮರಕೂಟ್ಲು ಅವರು ಮಾತನಾಡಿ, ರುದ್ರಭೂಮಿಯ ಸಮಗ್ರ ಅಭಿವೃದ್ಧಿಗೆ ಗ್ರಾಮಸ್ಥರು, ದಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಸಹಕಾರ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕವಿರಾಜ್ ಚಂದ್ರಿಗೆ, ಕೋಶಾಧಿಕಾರಿ ಸುದೀರ್ ಜಾರಂದಗುಡ್ಡೆ, ಉಪಾಧ್ಯಕ್ಷ

ಮನೋಜ್ ವಳವೂರ್, ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬ್ರಹ್ಮರಕೂಟ್ಲು ಸೇರಿದಂತೆ ಪ್ರಮುಖರಾದ ತಾರಾನಾಥ ಕೊಟ್ಟಾರಿ ತೇವು, ಪುರುಷೋತ್ತಮ ಕೊಟ್ಟಾರಿ, ರೂಪೇಶ್ ಜ್ಯೋತಿಗುಡ್ಡೆ, ಉದಯ ಕುಮಾರ್ ಜ್ಯೋತಿಗುಡ್ಡೆ, ಸಂತೋಷ್ ದೇವಂದಬೆಟ್ಟು, ರವಿರಾಜ್ ಜೈನ್, ಶಶಿಪ್ರಭಾ ಗುತ್ತೆಹಿತ್ತಲು ಹಾಗೂ ಗೋಪಾಲ ಗೋವಿನತೋಟ, ಜಗದೀಶ ಕಂಜತ್ತೂರು, ಪ್ರಶಾಂತ್ ಕನಪಾಡಿ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Comment