ಬಂಟ್ವಾಳ: ಇಲ್ಲಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಜಾರಂದಗುಡ್ಡೆ ನಿವಾಸಿ ಗುರುಪ್ರಸಾದ್ ಎಂಬವರ ಮೃತ ದೇಹ ಮಂಗಳೂರು ವಸತಿ ಗೃಹದಲ್ಲಿ ಗುರುವಾರ ಪತ್ತೆಯಾಗಿದೆ.
ಇದೇ 20 ರಂದು ಮಂಗಳೂರಿನ ಲಾಡ್ಜ್ನಲ್ಲಿ ತಂಗಿದ್ದ ಇವರು ಬಳಿಕ ಮನೆಗೆ ಬಾರದೆ ಅಲ್ಲೇ ತಂಗಿದ್ದರು. ಕಳೆದ ಮೂರು ದಿನಗಳಿಂದ ಕೊಠಡಿ ಮುಚ್ಚಿಕೊಂಡಿರುವುದನ್ನು ಕಂಡ ಸಿಬ್ಬಂದಿಗಳು ಸಂಶಯಗೊಂಡು ಗುರುವಾರ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪಾಂಡೇಶ್ವರ ಪೊಲೀಸ್ ಠಾಣಾ ಎಸೈ
ಶೀತಲ್ ನೇತೃತ್ವದಲ್ಲಿ ಕೊಠಡಿ ಬಾಗಿಲಿನ ಚಿಲಕ ಮುರಿದು ಒಳಗೆ ಪ್ರವೇಶಿಸಿ ನೋಡಿದಾಗ ಮೃತದೇಹ ಕಂಡು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಮೃತರಿಗೆ ಪತ್ನಿ ಮತ್ತು ಪುಟ್ಟ ಮಗು ಇದ್ದು, ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದರು ಎಂದು ತಿಳಿದು ಬಂದಿದೆ.















