ಮಂಗಳೂರು : ಫ್ರೆಂಡ್ಸ್ ಕ್ರಿಕೆಟರ್ಸ್ (ರಿ.) ಪಠೇಲ್ ಕಂಪೌಂಡ್ ಹೊಯ್ಗಿಬಜಾರ್ ಇದರ 22ನೇ ವಾರ್ಷಿಕೋತ್ಸವವು ಊರ ಹತ್ತು ಸಮಸ್ತರ ಸಹಕಾರದೊಂದಿಗೆ ಸಂಭ್ರಮದಿಂದ ಮಾ.18 ರಂದು ಶನಿವಾರ ಎಚ್.ಎಫ್.ಸಿ ಆಟದ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ಶಾಸಕ ಡಿ. ವೇದವ್ಯಾಸ್ ಕಾಮತ್ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಸಭಾ ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ಅಬ್ದುಲ್ ಲತೀಫ್ ಮಾತನಾಡಿ ಎಚ್.ಎಫ್.ಸಿ (ರಿ.) ತಂಡ ಒಳ್ಳೆಯ ಕೆಲಸಗಳನ್ನು ಮಾಡಿದ್ದು ಜನರ ಕಷ್ಟಗಳಿಗೆ ಸ್ಪಂದಿಸಿದ ರೀತಿಯನ್ನು ಶ್ಲಾಘಿಸಿದರು, ಮುಖ್ಯ ಅತಿಥಿಗಳಾಗಿ ಗಂಗಾಧರ್ ಗುರಿಕಾರ, ಶೇಖರ್ ಸಾಲಿಯನ್,ವಿನೋದ್ ಫಿಶ್ ನೆಟ್, ಉಮೇಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಶ್ರೀನಿವಾಸ್, ಸುಕೇತ್ ರಾಜ್, ಸಂಪತ್ ಕುಮಾರ್, ಸ್ವಾಮಿ,
ಭಾನುಮತಿ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತಂಡದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಹಕಾರ ನೀಡಿದ ಶೇಖರ್ ಸಾಲಿಯಾನ್ ಹಾಗೂ ಸ್ವಾಮಿ ಇವರನ್ನು ಸನ್ಮಾನಿಸಲಾಯಿತು, ಸನ್ನಿಧಿ ಕಲಾವಿದರು (ರಿ.) ಉಡುಪಿ ತಂಡದ ನಿರ್ದೇಶಕರಾದ ರವಿಕುಮಾರ್ ಕಡೆಕಾರ್ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪ್ರಸಕ್ತ 2022-23ನೇ ಸಾಲಿನ 30ಗಜಗಳ ಆಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಅಂಕಪಟ್ಟಿಯ ಅಗ್ರ 10 ತಂಡಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು, ರೋಹಿತ್ ಉಳ್ಳಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸನ್ನಿಧಿ ಕಲಾವಿದರು (ರಿ.) ಉಡುಪಿ ಇವರಿಂದ ಅಪ್ಪೆ ಮಂತ್ರದೇವತೆ ತುಳು ಭಕ್ತಿ ಪ್ರಧಾನ ನಾಟಕ ಪ್ರದರ್ಶಿಸಲಾಯಿತು.














