ಮಾಣಿ:- ಅ.18. ಇವತ್ತಿನ ದಿನಗಳಲ್ಲಿ ಬರಿ ಮೊಬೈಲ್ ನಲ್ಲಿ ಪುಸ್ತಕ ಓದುವುದನ್ನೇ ಹವ್ಯಾಸವಾಗಿಸಿಕೊಂಡಿದ್ದಾರೆ. ನಾವು ಗ್ಯಾಜೆಟ್ಗಳಲ್ಲಿ ಓದುವ ಹವ್ಯಾಸ ಬೆಳೆಸಿಕೊಂಡರೆ ನಮ್ಮ ಬುದ್ಧಿ ಮಟ್ಟ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಪುಸ್ತಕವನ್ನು ಕೈಯಲ್ಲಿ ಹಿಡಿದು ಮನಸು ಕೊಟ್ಟು ಓದಿದ್ದರೆ ನಮಗೆ ಜ್ಞಾನ ಹೆಚ್ಚಾಗುತ್ತದೆ ಮತ್ತು ಮನಸ್ಸಿಗೆ ತೃಪ್ತಿ ಸಿಗುತ್ತದೆ ಎಂದು ದ. ಕ. ಜಿ. ಪ. ಮಾ. ಹಿ. ಪ್ರಾ ಮಾಣಿ ಶಾಲೆಯಲ್ಲಿ ಸ್ವತಂತ್ರತ್ಯೋತ್ಸವದ ಅಮೃತಮಹೋತ್ಸವದ ಧ್ವಜಾರೋಹಣದ ವೇಳೆ ಪುಸ್ತಕ ಜೋಳಿಗೆಯ ದಕ್ಷಿಣ ಕನ್ನಡ ಜಿಲ್ಲೆಯ ಸದಸ್ಯರಾದ ಶ್ರೀಮತಿ ಮಾನಸ ವಿಜಯ್ ಕೈಂತಜೆ ಅವರು ಹೇಳಿದರು.
ಹಾವೇರಿ ಜಿಲ್ಲೆಯ ರಾಣೇಬೆನ್ನೂರದ ಬಸವರಾಜ ಬಾಗೇವಾಡಿ ಇವರು ಹುಟ್ಟುಹಾಕಿದ ಶೃಂಗಾರ ಪ್ರಕಾಶನ ಸಂಸ್ಥೆಯಿಂದ ಹಳೆಯ ಪುಸ್ತಕ ಸಂಗ್ರಹ ಅಭಿಯಾನವನ್ನು ಹುಟ್ಟು ಹಾಕಿ ಕೊಂಡು ನಾಡಿನಾದ್ಯಂತ ಪುಸ್ತಕ ಜೋಳಿಗೆಹಿಡಿದುಕೊಂಡು ಜೋಳಿಗಿಗೆ ಬಂದ ಪುಸ್ತಕಗಳನ್ನು ಓದುಗರಿಗೆ ಕೊಡುವುದಲ್ಲದೆ ಕನ್ನಡ ಶಾಲೆಗೆ ಕೊಡುವ ವ್ಯವಸ್ಥೆ ಮಾಡುತ್ತಾ ಬಂದಿದ್ದಾರೆ.
ದ. ಕ. ಜಿಲ್ಲೆಯ ಬಂಟ್ಟಾಳ ತಾಲ್ಲೂಕಿನ ಮಾಣಿ ಪಂ.ಮಾ. ಹಿ. ಪ್ರಾ. ಶಾಲೆಗೆ 50 ಪುಸ್ತಕಗಳನ್ನು ಕೊಟ್ಟಿರುತ್ತಾರೆ ಎಂದು ಪುಸ್ತಕಗಳನ್ನು ಸ್ವೀಕರಿಸಿದ ಶಾಲೆಯ ಮುಖ್ಯಉಪಾಧ್ಯಾಯರಾದ ಚಂದ್ರಾವತಿ ಅವರು ತಿಳಿಸಿದ್ದಾರೆ. ಬಾಲಕೃಷ್ಣ
ಆಳ್ವ, ಪಂಚಾಯತ್ ಅಧ್ಯಕ್ಷರು, ಮಾಣಿ ಇವರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ್ದರು.
ಶೃಂಗಾರ ಕಾವ್ಯ ಪ್ರಕಾಶನ ಸಂಸ್ಥೆಯ ಸದಸ್ಯರಾದ ಮಾನಸ ಕೈಂತಜೆ ರಾಣೆಬೇನ್ನೂರಿನ ಬಾಗೇವಾಡಿಮಠ ಅವರು ನನಗೆ ಪುಸ್ತಕ ಸೇವೆ ಮಾಡಲು ಒಂದು ಸುವರ್ಣ ಅವಕಾಶವನ್ನು ನೀಡಿದ್ದಾರೆ. ಇವರು ನಮ್ಮ ಜಿಲ್ಲೆಯ ಶಾಲೆಯಗೆ ಪುಸ್ತಕ ಕೊಡುವುದಲ್ಲದೆ ಬೇರೆ ಬೇರೆ ಜಿಲ್ಲೆಗೆ ಕೊಡುವ ವ್ಯವಸ್ಥೆ ಮಾಡುತ್ತಾ ಬಂದಿದ್ದಾರೆ.ಈ ಕಾರ್ಯಕ್ರಮಕ್ಕೆ ಪ್ರಪುಲ್ಲ ರೈ, ಜಗನ್ನಾಥ ಶೆಟ್ಟಿ, ಹಾಗೂ ಗ್ರಾಮದ ಹಿರಿಯ ನಾಗರಿಕರು,ಶಾಲೆಯ ಸಿಬ್ಬಂದಿ ವರ್ಗದವರು ಮತ್ತಿತರರು ಭಾಗವಹಿಸಿದ್ದರು.















