ಬಂಟ್ವಾಳ :ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜೂನ್ 21 ಶನಿವಾರ ಬೆಳಿಗ್ಗೆ ರಂಗೋಲಿ ಸಭಾಭವನದಲ್ಲಿ ಆಚರಿಸಲಾಯಿತು. ಯೋಗ ತರಬೇತುದಾರರಾಗಿ ಪ್ರತಿಮಾ ಪದ್ಮನಾಭ ಯೋಗಾಭ್ಯಾಸ ನಡೆಸಿಕೊಟ್ಟರು.
ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್ , ಶಿವಪ್ರಸಾದ್ ಶೆಟ್ಟಿ , ಸುದರ್ಶನ್ ಬಜ, ರಾಮದಾಸ್ ಬಂಟ್ವಾಳ, ಸುಲೋಚನಾ ಜಿ ಕೆ ಭಟ್, ದಿನೇಶ್ ಅಮ್ಟಾರು, ಯಶೋಧರ ಕರ್ಬೆಟ್ಟು, ಮೋಹನ್ ಪಿ ಎಸ್ ,ಪುರುಷೋತಮ ಸಾಲಿಯನ್ , ರಮೇಶ್ ಕುದ್ರೆಬೆಟ್ಟು , ಪ್ರೇಮನಾಥ ಶೆಟ್ಟಿ , ಆನಂದ ಶಂಬೂರು,
ಶರ್ಮಿತ್ ಜೈನ್, ಸಂಪತ್ ಕಡೇಶಿವಾಲಯ, ಗಣೇಶ್ ದಾಸ್ , ಹರೀಶ್ ಪೇರಾಜೆ ಮತ್ತಿತರರು ಉಪಸ್ಥಿತರಿದ್ದರು.
ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಯೋಗಾಭ್ಯಾಸ:
ಬಂಟ್ವಾಳ :ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಒಡ್ದುರು ಫಾರ್ಮ್ ನಲ್ಲಿ ಯೋಗಾಭ್ಯಾಸ ನಡೆಸಿದರು















