ಬಂಟ್ವಾಳ : ದಿ.ಜಾರಪ್ಪ ಶೆಟ್ಟಿ ಅವರ ದೂರದೃಷ್ಠಿಯಿಂದ ಸ್ಥಾಪಿತವಾದ ಈ ಶಾಲೆಯಿಂದಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರಕುವಂತಾಗಿದೆ. ಧಾರ್ಮಿಕ ಚಿಂತನೆಯಡಿಯಲ್ಲಿ ನಡೆಯುವ ಶಾಲೆಯಿಂದಾಗಿ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ತಿಳಿಯುವಂತಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಮಂಗಳವಾರ ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾ ಪ್ರೌಢ ಶಾಲೆಗೆ ದಾನಿಗಳ ಸಹಕಾರದಲ್ಲಿ ಸುಮಾರು 7 ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಅಕ್ಷರ ದಾಸೋಹ ಕೊಠಡಿಯನ್ನು ಅವರು ಉದ್ಘಾಟಿಸಿಮಾತನಾಡಿದರು.
ಈ ಸಂದರ್ಭದಲ್ಲಿ ಅವರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ದಾನಿಗಳು ಕೊಡಮಾಡಿದ ಸಮವಸ್ತ್ರ ಮತ್ತು ಲೇಖನ ಸಾಮಾಗ್ರಿ ವಿತರಿಸಿದರು. ಎಸೆಸ್ಸೆಲ್ಸಿ ಸಾಧಕರನ್ನು ಅಭಿನಂದಿಸಿದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಸತ್ಯಶಂಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಗಮಕ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಮೋಹನ ಕಲ್ಲೂರಾಯ ಅವರು ವಿಶೇಷ ಉಪನ್ಯಾಸ ನೀಡಿದರು.
ಉಳಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಮೈರಾ, ಬೆಂಗಳೂರು ಬಸವನಗುಡಿ ರೋಟರಿ ಕ್ಲಬ್‌ಸದಸ್ಯ ಶಶಿಧರ್ ಎಚ್.ಇ., ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಕೆ.ರಾಜೇಂದ್ರ ಕಕ್ಯಪದವು, ಹಳೆ ವಿದ್ಯಾರ್ಥಿಸಂಘ ಅಧ್ಯಕ್ಷ ಕೆ. ಚಿದಾನಂದ ರೈ, ಕಕ್ಯಪದವು, ನಿವೃತ್ತ
ಮುಖ್ಯ ಶಿಕ್ಷಕರಾದ ವೆಂಕಟೇಶ ದಾಮ್ಲೆ, ಜಗನ್ನಾಥ ಶೆಟ್ಟಿ, ಕಕ್ಯಪದವು ಗರೊಡಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ನಿವೃತ್ತ ಅಧಿಕಾರಿ ರಘು ಶೆಟ್ಟಿ ನಡುವಲಚ್ಚಿಲ್, ನಿವೃತ್ತ ಶಿಕ್ಷಕಿ ಲಲಿತಾ ಪಿ.ಎನ್., ಧ.ಗ್ರಾ.ಯೋಜನೆಯ ಬಂಟ್ವಾಳ ಅಽಕಾರಿ ಜನಾರ್ದನ, ಉಳಿಬಲು ಸ.ಹಿ.ಪ್ರಾ.ಶಾಲೆ ಮುಖ್ಯಶಿಕ್ಷಕ ಅಕ್ಬರ್ ಆಲಿ, ಗ್ರಾ.ಪಂ. ಸದಸ್ಯರಾದ ಸಂಜೀವ ಗೌಡ ಅಗ್ಪಲ, ಗುಲಾಬಿ, ವಿಶಾಲಾಕ್ಷಿ, ಶಾಂತಾ, ರೇವತಿ, ರಕ್ಷಿತಾ,ಚೇತನ್‌ಊರ್ದೊಟ್ಟು,, ವಸಂತ ರಾಮನಗರ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಮುತ್ತಪ್ಪ ಗೌಡ, ವಿಶ್ವನಾಥ ಸಾಲ್ಯಾನ್ ಬಿತ್ತ, ನಾರಾಯಣ ರೈ, ವೀರೇಂದ್ರ ಕುಮಾರ್ ಜೈನ್, ರಾಮಪ್ಪ ಪೂಜಾರಿ, ವಿಂದ್ಯಾಶ್ರೀ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರು, ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಉಳಿ ದಾಮೋದರ ನಾಯಕ್ ಸ್ವಾಗತಿಸಿ, ಪ್ರಸ್ತಾವಿಸಿದರು. ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಸಂಚಾಲಕ ಯೋಗೀಶ್ ಕುಮಾರ್ ವಂದಿಸಿದರು. ಶಿಕ್ಷಕ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು















