Coastal Bulletin

ಮಂಗಳೂರು: : ಕಾಲೇಜೊನ್ದರ ಪ್ರಾಧ್ಯಾಪಕಿಯೋರ್ವರ ಬಗ್ಗೆ ಮಾನಹಾನಿಕರವಾಗಿ ಪತ್ರ ಹಾಗೂ ಪೋಸ್ಟರ್‌ ಗಳನ್ನು ಬರೆದು ಹಂಚುತ್ತಿದ್ದ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಅವುಗಳನ್ನು ಅಂಟಿಸಿ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಷ್ಠಿತ ಕಾಲೇಜಿನ ಸಂಚಾಲಕ ಹಾಗೂ ಇಬ್ಬರು ಪ್ರಾಧ್ಯಾಪಕರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಮನೆ ನಿವಾಸಿ ಪ್ರಕಾಶ್ ಶೆಣೈ (44), ಬಂಟ್ವಾಳ ತಾಲೂಕು ಸಿದ್ದಕಟ್ಟೆ ನಿವಾಸಿ ಮೇಗಿನ ಉಳಿರೋಡಿ ನಿವಾಸಿ ಪ್ರದೀಪ್ ಪೂಜಾರಿ (36) ಹಾಗೂ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು,ಸೀತಾನದಿ ನಡ್ಪಾಲು ಮನೆಯ ತಾರಾನಾಥ ಬಿ ಎಸ್ ಶೆಟ್ಟಿ (32) ಬಂಧಿತ ಆರೋಪಿಗಳು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಪ್ರಕಾಶ್ ಶೆಣೈ, ಪ್ರದೀಪ್ ಪೂಜಾರಿ ಹಾಗೂ

ತಾರಾನಾಥ ಬಿ ಎಸ್ ಶೆಟ್ಟಿ ರವರನ್ನು ಬಂದಿಸಿದ್ದಾರೆ, ಆರೋಪಿಗಳು ಕಾಲೇಜಿನ ಸಂಚಾಲಕ ಹಾಗೂ ಪ್ರಾಧ್ಯಾಪಕರಾಗಿದ್ದು, ಅವರು ಅಕ್ರಮ ಕೂಟ ರಚಿಸಿ ಕೃತ್ಯ ಎಸಗಿದ್ದಾರೆ . ಮಹಿಳಾ ಪ್ರಾಧ್ಯಾಪಕಿಯ ಫೋಟೊ ಬಳಸಿ ಮಾನಹಾನಿಕರವಾದ ಬರಹವನ್ನು ಬರೆದು ಲೆಟರ್ ಮೂಲಕ ಸಹೋದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆಯ ಅಧಿಕಾರಿಗಳಿಗೆ ಅಂಚೆ ಮೂಲಕ ಕಳುಹಿಸಿಕೊಡುತ್ತಿದ್ದರು ಎನ್ನಲಾಗಿದೆ.


Leave a Comment