ಕಿರುತೆರೆಯ ಜನಮೆಚ್ಚಿದ ಧಾರವಾಹಿ 'ಕನ್ನಡತಿ' ಇದೀಗ ಹಿಂದಿಗೆ ಡಬ್ ಆಗಲಿದೆ. ಇದು ಈ ಧಾರವಾಹಿಗೆ ಮತ್ತೊಂದು ಕಿರೀಟವೆ ಸರಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಕನ್ನಡತಿ’ ಈಗ ಹಿಂದಿಗೆ ಡಬ್ ಆಗುಲು ಮುಂದಾಗಿದೆ. ಆ ಮೂಲಕ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪಲಿದ್ದಾರೆ ಕಿರಣ್ ರಾಜ್ ಹಾಗೂ ರಂಜನಿ ರಾಘವನ್ ಜೋಡಿ. ಈ ಸೀರಿಯಲ್ನಲ್ಲಿ ಹರ್ಷ ಎಂಬ ಪಾತ್ರವನ್ನು ಕಿರಣ್ ರಾಜ್ ನಿಭಾಯಿಸುತ್ತಿದ್ದು, ಭುವಿ ಎಂಬ ಪಾತ್ರಕ್ಕೆ ರಂಜನಿ ರಾಘವನ್ ಬಣ್ಣ ಹಚ್ಚಿದ್ದಾರೆ. ಕನ್ನಡದ ಸೊಗಡಿನ ಈ ಕಥೆಯನ್ನು ಹಿಂದಿ ಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎಂಬ ಆತಂಕವಿದೆ.
ಕಿರಣ್ ರಾಜ್ ಮೊದಲು ಹಿಂದಿ ಕಲರ್ಸ್ ವಾಹಿನಿಯ ಸಾಕಷ್ಟು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ನಟ ಇವರು. ಇದೀಗ ‘ಕನ್ನಡತಿ’ ಡಬ್ಬಿಂಗ್ ವರ್ಷನ್ ಮೂಲಕ ಮತ್ತೆ ಅವರು ಹಿಂದಿ ಕಿರುತೆರೆಗೆ ಬರಲಿದ್ದಾರೆ. ‘ಅಜ್ನಬಿ ಬನೇ ಹಮ್ಸಫರ್’ ಹೆಸರಿನಲ್ಲಿ ಈ ಧಾರಾವಾಹಿ ಹಿಂದಿಗೆ ಡಬ್ ಆಗಲಿದೆ. ಕಲರ್ಸ್ ರಿಷ್ತೆ ಯುಕೆ ವಾಹಿನಿಯಲ್ಲಿ ಶೀಘ್ರವೇ ಇದರ ಪ್ರಸಾರ ಆರಂಭವಾಗಲಿದೆ. ಮರಾಠಿಗೂ ಈ ಸೀರಿಯಲ್ ಡಬ್ ಆಗಿದೆ.
ಒಂದು ಇಮೇಜ್ ಸಿಕ್ಕಿದೆ. ತಮ್ಮದೇ ಶೈಲಿಯಿಂದ ಹಲವಾರು ಅಭಿಮಾನಿ ಬಳಗವನ್ನು ಹೊಂದಿದ್ದ ಇವರು ಸಿನಿಮಾದಲ್ಲೂ ನಟಿಸಿ, ಸೈ ಎನಿಸಿಕೊಂಡಿದ್ದಾರೆ. .ಇತ್ತೀಚೆಗಷ್ಟೇ ಅವರು ‘ಭರ್ಜರಿ ಗಂಡು’ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಈಗ ‘ಬಡ್ಡೀಸ್’ ಸಿನಿಮಾದ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಆ ಸಿನಿಮಾದ ಟೀಸರ್ ಏಪ್ರಿಲ್ 25ರಂದು ಬಿಡುಗಡೆ ಆಗಲಿದೆ. ಅದಕ್ಕಾಗಿ ಕಿರಣ್ ರಾಜ್ ಅಭಿಮಾನಿಗಳು ಕಾದಿದ್ದಾರೆ. ಜೂನ್ನಲ್ಲಿ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ. ಇತ್ತೀಚೆಗೆ ಪೋಸ್ಟರ್ ರಿಲೀಸ್ ಮೂಲಕ ಈ ಸಿನಿಮಾ ಗಮನ ಸೆಳೆದಿತ್ತು.














