Coastal Bulletin

ಬಂಟ್ವಾಳ: ಜನ ಸಾಮಾನ್ಯರ ಬದುಕು ಕಟ್ಟುವ,ಆರ್ಥಿಕ ಸದೃಢತೆ , ಜೀವನಮಟ್ಟ ಸುಧಾರಿಸುವ ಜೊತೆಗೆ ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸುವ ಬಹುದೊಡ್ಡ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಮಾಡುತ್ತಿದ್ದು ಆ ಮೂಲಕ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಕನಸು ನನಸಾಗುತ್ತಿದೆ ಎಂದು ಸಂಸ್ಕಾರ ಭಾರತಿಯ ಜಿಲ್ಲಾ ಅಧ್ಯಕ್ಷರಾದ ತೇವು ತಾರಾನಾಥ ಕೊಟ್ಟಾರಿ ಹೇಳಿದ್ದಾರೆ. ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಯ ತುಂಬೆ ಮತ್ತು ಪುದು ವಲಯದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಧರ್ಮದರ್ಶಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಯವರು ನೆರವೇರಿಸಿದರು.

ವಲಯ ದ ನಾಲ್ಕು ಒಕ್ಕೂಟಗಳಾದ ಫರಂಗಿಪೇಟೆ , ಸುಜೀರು ತುಂಬೆ ಕಳ್ಳಿಗೆ ಗಳಲ್ಲಿ 127 ಸ್ವಸಹಾಯ ಸಂಘಗಳಿದ್ದು 1656 ಪಾಲುದಾರ ಸದಸ್ಯರನ್ನು ಒಳಗೊಂಡಿದೆ . ಒಟ್ಟು ನಾಲ್ಕು ಒಕ್ಕೂಟಗಳಲ್ಲಿ 2 ಕೋಟಿ 48 ಲಕ್ಷದ 40 ಸಾವಿರ ಉಳಿತಾಯವಿದೆ . ಸದಸ್ಯರ ಅಭಿವೃದ್ಧಿಯ ಹಿತ ದೃಷ್ಟಿಯಿಂದ ಮೂಲ ಸೌಕರ್ಯ ನಿಧಿ , ಸುತ್ತು ನಿಧಿ , ಉತ್ಪಾದಕ ನಿಧಿ , ಸ್ವ ಗೃಹ ನಿಧಿ ಮೂಲಕ ಅವರವರ ಅಗತ್ಯಗನುಸಾರವಾಗಿ ಸುಮಾರು 16 ಕೋಟಿ 60ಲಕ್ಷ ಪ್ರಗತಿ ನಿಧಿ ನೀಡಲಾಗಿದೆ . ನೀಡಿದ ಎಲ್ಲ ಪ್ರಗತಿ ನಿಧಿ ಸದ್ವಿನಿಯೋಗ ವಾಗಿದೆ ಮತ್ತು ಶೇಕಡಾ 100% ಮರುಪಾವತಿಯಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬಂಟ್ವಾಳದ ಯೋಜನಾಧಿಕಾರಿ ಜಯಾನಂದ ಪಿ ಯವರು ಮಾಹಿತಿ ನೀಡಿದರು.

ಫರಂಗಿಪೇಟೆ ಒಕ್ಕೂಟಕ್ಕೆ ಸುಕೇಶ್ ಶೆಟ್ಟಿ ತೇವು , ಸುಜೀರು ಒಕ್ಕೂಟಕ್ಕೆ ಲಿಡಿಯಾ ಪಿಂಟೋ,ಕಳ್ಳಿಗೆ ಒಕ್ಕೂಟಕ್ಕೆ ಜಯಂತ,ತುಂಬೆ ಒಕ್ಕೂಟಕ್ಕೆ ನವೀನ್ ಅಧ್ಯಕ್ಷರಾಗಿ

ಆಯ್ಕೆಯಾದರು.

ವೇದಿಕೆಯಲ್ಲಿ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ , ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮ್ಲಾನ್ ಮಾರಿಪಳ್ಳ , ದ ಕ ಕೃಷಿ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಸುಜೀರು ಬೀಡು ,ಫರಂಗಿಪೇಟೆ ಚರ್ಚ್ ನ ವಂದನೀಯ ಜೆರಾಲ್ಡ್ ಲೋಬೊ,ಪದ್ಮ ಸರ್ವಿಸೆಸ್ ಬಿಸಿ ರೋಡ್ನ ಮಾಲಕ ಸುಜೀರುಗುತ್ತು ಐತಪ್ಪ ಆಳ್ವ , ದೇವಂದಬೆಟ್ಟು ಶ್ರೀ ಲಕ್ಷ್ಮಿವಿಷ್ಣುಮೂರ್ತಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ನವೀನ್ ಚಂದ್ರ ಶೆಟ್ಟಿ ಮುಂಡಾಜೆ ಗುತ್ತು , ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಫರಂಗಿಪೇಟೆ ಅಧ್ಯಕ್ಷ ಸುಜೀರುಗುತ್ತು ಚಂದ್ರಶೇಖರ ಗಾಂಭೀರ , ಕೇಂದ್ರ ಒಕ್ಕೂಟ ಅಧ್ಯಕ್ಷ ಮಾದವ ವಳವೂರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಸತ್ಯ ನಾರಾಯಣ ಪೂಜೆ ನಡೆಯಿತು ತುಂಬೆ ವಲಯ ಮೇಲ್ವಿಚಾರಕಿ ಶ್ರೀಮತಿ ಮಮತಾ ರವರು ಸ್ವಾಗತಿಸಿದರು , ಸೇವಾ ಪ್ರತಿನಿಧಿ ಮಲ್ಲಿಕಾ ವರದಿ ವಾಚಿಸಿದರು ,ಶಿಕ್ಷಕಿ ಭುವನೇಶ್ವರಿ ಶೆಟ್ಟಿ ಯವರು ಕಾರ್ಯಕ್ರಮ ನಿರೂಪಿಸಿದರು , ಸೇವಾ ಪ್ರತಿನಿಧಿ ಅಮಿತಾ , ಅನಿತಾ ಚಂದ್ರಾವತಿ ಸಹಕರಿಸಿದರು.

Leave a Comment