Coastal Bulletin

ಬಂಟ್ವಾಳ:ತಾಲೂಕಿನ ನಾವೂರುಗ್ರಾಮದ ಅಗ್ರಹಾರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ವರ್ಷಾವಧಿ ಉತ್ಸವವು ದೇವಳದ ಪ್ರಧಾನ ಅರ್ಚಕರಾದ ವೇ.ಮೂ. ಸುದರ್ಶನ್ ಬಲ್ಲಾಳ್ ಅವರ ಮಾರ್ಗದರ್ಶನದಲ್ಲಿ ಜ.30 ಸೋಮವಾರದಂದು ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಮನರಂಜನಾ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

ಅಂದು ಬೆಳಿಗ್ಗೆ 8-00ರಿಂದ ಶ್ರೀ ದೇವರಿಗೆ ವಿವಿಧ ವೈಧಿಕ ವಿಧಾನ,ಅಭಿಷೇಕಗಳು, ಶ್ರೀ ನಾಗ ದೇವರಿಗೆ ಆಶ್ಲೇಷಾಬಲಿ, ತಂಬಿಲ ಸೇವೆ,ಮಧ್ಯಾಹ್ನ 12-30ಕ್ಕೆ - ಶ್ರೀ ಗೋಪಾಲಕೃಷ್ಣ ದೇವರ ಮಹಾಪೂಜೆ,ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.

ರಾತ್ರಿ 9-00ಕ್ಕೆ ಶ್ರೀ ಗೋಪಾಲಕೃಷ್ಣ ದೇವರಿಗೆ ರಂಗಪೂಜೆ,

ಶ್ರೀ ದೇವರ ಬಲಿ ಉತ್ಸವ ಪಲ್ಲಕಿ ಉತ್ಸವ ಹಾಗ ಮಂತ್ರಾಕ್ಷತೆಯೊಂದಿಗೆ ಮಂಗಲ, ಆನಂತರ ತುಳು ನಾಟಕ ಪ್ರದರ್ಶನ ನಡೆಯಲಿದೆ.

ಕ್ಷೇತ್ರಕ್ಕೆ ನೂತನ ಬ್ರಹ್ಮರಥ ನಿರ್ಮಾಣ ಹಂತದಲ್ಲಿದೆ. ಉತ್ಸವದಂದು ಸಂಪಿಗೆ ಹರೀಶ್‌ ಆಚಾರ್ಯ ಇವರಿಗೆ ಬ್ರಹ್ಮರಥ ನಿರ್ಮಾಣಕ್ಕೆ ಪ್ರಥಮ ವೀಳ್ಯವನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Leave a Comment